India-Pakistan War Updates; ಕದನವಿರಾಮ ಘೋಷಣೆಯಾಗಿದೆಯಂತ ಸುಮ್ಮನಿರಲ್ಲ, ಭಯೋತ್ಪಾದನೆ ಮೂಲೋತ್ಪಾಟನೆ ಮಾಡುತ್ತೇವೆ: ಸಿದ್ದರಾಮಯ್ಯ

Updated on: May 10, 2025 | 7:55 PM

ಭಾರತ ಮತ್ತು ಪಾಕಿಸ್ತಾನ ಸೇನೆಗಳ ನಡುವೆ ಘೋಷಣೆಯಾಗಿರುವ ಕದನವಿರಾಮವನ್ನು ತಾನು ಸ್ವಾಗತಿಸುವುದಾಗಿ ಸಿದ್ದರಾಮಯ್ಯ ಹೇಳಿದರು. ಎರಡೂ ದೇಶಗಳ ಪ್ರಧಾನಿಗಳು, ರಕ್ಷಣಾ ಸಚಿವರು ಮತ್ತು ಅಧಿಕಾರಿಗಳು ಈ ನಿರ್ಣಯ ತೆಗೆದುಕೊಂಡಿದ್ದಾರೆ ಎಂದ ಸಿದ್ದರಾಮಯ್ಯ ನಮಗೆ ಯುದ್ಧ ಬೇಡ ಎನ್ನುತ್ತ ಮುಗಳ್ನಕ್ಕು ತಾನು ಹಾಗೆ ಹೇಳಿದ್ದಕ್ಕೆ ದೊಡ್ಡ ಯುದ್ಧವೇ ನಡೆದಿತ್ತು ಎಂದರು.

ಬೆಂಗಳೂರು, ಮೇ 10: ವಿಧಾನಸೌಧದಲ್ಲಿ ಕಂದಾಯ ಮತ್ತು ಗೃಹ ಇಲಾಖೆ ಅಧಿಕಾರಿಗಳೊಂದಿಗೆ ಸಭೆಯ ನಂತರ ಸುದ್ಧಿಗೋಷ್ಠಿ ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯುದ್ಧ ವಿರಾಮ (ceasefire) ಘೋಷಣೆಯಾಗಿದೆ ಅಂತ ಸರ್ಕಾರವೇನೂ ಕೈಕಟ್ಟಿ ಕೂರೋದಿಲ್ಲ, ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡುವುದು ನಮ್ಮ ಗುರಿ ಎಂದು ಹೇಳಿದರು. ಕರ್ನಾಟಕದಲ್ಲಿದ್ದ ಎಲ್ಲ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸಲಾಗಿದೆ, ಅದರೆ ಮೈಸೂರಲ್ಲಿ 6ವರ್ಷದೊಳಗಿನ ಮೂರು ಮಕ್ಕಳು ಉಳಿದುಕೊಂಡು ಬಿಟ್ಟಿವೆ, ಅವರ ತಂದೆ ಪಾಕಿಸ್ತಾನಿ ಮತ್ತು ತಾಯಿ ಮೈಸೂರಿನವರು, ಅವರನ್ನು ಬಾರ್ಡರ್​ವರೆಗೆ ಕರೆದೊಯ್ಯಲಾಗಿತ್ತು, ಅದರೆ ಪಾಕಿಸ್ತಾನದೊಳಗೆ ಒಯ್ಯಲು ಯಾರೂ ಬಾರದ ಕಾರಣ ವಾಪಸ್ಸು ತರಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಇದನ್ನೂ ಓದಿ:  ಉಗ್ರ ಮಸೂದ್ ಅಜರ್​ಗೆ ಮನೆಯವರೇ ಸತ್ತರೂ ಕಣ್ಣೀರಿಲ್ಲ, ಹತಾಶೆಯಿಲ್ಲ: ಭಯೋತ್ಪಾದನೆಯೇ ಕನಸು!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ