ನಾವು ತರೋದೇ ಹಲಾಲ್ ಕಟ್ ಮಾಂಸ ಅನ್ನುತ್ತಾರೆ ಗೌಡಾಸ್ ಹೋಟೆಲ್ ಮಾಲೀಕ ನಂಜಪ್ಪ!!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 30, 2022 | 5:59 PM

ಕಳೆದ 35-40 ವರ್ಷಗಳಿಂದ ಈ ಹೋಟೆಲ್ ನಡೆಸುತ್ತಿರುವ ನಂಜಪ್ಪ ಅವರು ಇದುವರೆಗೆ ಮುಸಲ್ಮಾನರ ಅಂಗಡಿಗಳಿಂದಲೇ ಮಾಂಸ ತರಿಸುತ್ತಿರುವುದು ಅಂತ ಹೇಳುತ್ತಾರೆ. ಮುಸ್ಲಿಂ ಸಮುದಾಯದ ಗ್ರಾಹಕರು ಹೋಟೆಲ್ ಗೆ ಬಂದಾಗ ಹಲಾಲ್ ಕಟ್ ಮಾಂಸವೇ ಎಂದು ಕೇಳುತ್ತಾರೆ ಆದರೆ ಹಿಂದೂ ಗ್ರಾಹಕರು ಕೇಳೋದಿಲ್ಲ ಅಂತ ನಂಜಪ್ಪ ಹೇಳುತ್ತಾರೆ.

ನಾವು ಮತ್ತೊಂದು ವಿಡಿಯೋನಲ್ಲಿ ಈ ಹೋಟೆಲ್ ಬಗ್ಗೆ ಮಾತಾಡಿದ್ದೇವೆ. ಮಾಗಡಿಯ ಶ್ರೀನಿವಾಸ ಎನ್ನುವವರು ಅಂಜಪ್ಪ ಹೆಸರಿನ ಒಕ್ಕಲಿಗರು ನಡೆಸುವ ಈ ಹೋಟೆಲಿನಲ್ಲಿ ಹಲಾಲ್ ಕಟ್ (halal cut) ಅಲ್ಲದ ಮಾಂಸ ಅಂದರೆ ಕೇವಲ ಹಿಂದೂಗಳು ನಡೆಸುವ ಮಾಂಸದಂಗಡಿಗಳಿಂದ (meat stall) ಮಾತ್ರ ಮಾಂಸ ತರಿಸೋದು ಅಂತ ಹೇಳಿದ್ದರು. ಅದರೆ ಹೋಟೆಲ್ ಮಾಲೀಕ ನಂಜಪ್ಪನವರು (Nanjappa) ಶ್ರೀನಿವಾಸ ಹೇಳಿರುವುದಕ್ಕೆ ವಿರುದ್ಧವಾದ ವಿಷಯ ಹೇಳುತ್ತಿದ್ದಾರೆ. ನಾವು ಹಲಾಲ್ ಕಟ್ ಮಾಂಸವನ್ನೇ ತರೋದು, ಹಲಾಲ್ ಕಟ್ ಇಲ್ಲದ ಅಂದರೆ ಹಿಂದೂಗಳು ನಡೆಸುವ ಚಿಕನ್ ಮತ್ತು ಮಟನ್ ಅಂಗಡಿಗಳು ಬಹಳ ಕಮ್ಮಿ, ಚಿಕನ್ ಅಂಗಡಿ ಸಿಕ್ಕಾವು ಆದರೆ ಮಟನ್ ಅಂಗಡಿಗಳೆಲ್ಲ ಮುಸಲ್ಮಾನರೇ ನಡಸೋದು ಅಂತ ಅವರು ಹೇಳುತ್ತಾರೆ. ಮುಸ್ಲಿಂ ಅಂಗಡಿಗಳಲ್ಲಿ ಹಲಾಲ್ ಮಾಡಿರುವ ಮಾಂಸವನ್ನೇ ತರೋದು ಅಂತ ನಂಜಪ್ಪ ಸ್ಪಷ್ಟವಾಗಿ ಹೇಳುತ್ತಿದ್ದಾರೆ.

ಕಳೆದ 35-40 ವರ್ಷಗಳಿಂದ ಈ ಹೋಟೆಲ್ ನಡೆಸುತ್ತಿರುವ ನಂಜಪ್ಪ ಅವರು ಇದುವರೆಗೆ ಮುಸಲ್ಮಾನರ ಅಂಗಡಿಗಳಿಂದಲೇ ಮಾಂಸ ತರಿಸುತ್ತಿರುವುದು ಅಂತ ಹೇಳುತ್ತಾರೆ. ಮುಸ್ಲಿಂ ಸಮುದಾಯದ ಗ್ರಾಹಕರು ಹೋಟೆಲ್ ಗೆ ಬಂದಾಗ ಹಲಾಲ್ ಕಟ್ ಮಾಂಸವೇ ಅಂತ ಕೇಳುತ್ತಾರೆ ಆದರೆ ಹಿಂದೂ ಗ್ರಾಹಕರು ಕೇಳೋದಿಲ್ಲ ಅಂತ ನಂಜಪ್ಪ ಹೇಳುತ್ತಾರೆ.

ಕುರಿಗಳನ್ನು ಸಾಕೋದು ಹಿಂದೂಗಳಾದರೂ ಅವುಗಳನ್ನು ಕುಯ್ಯುವುದು ಮುಸಲ್ಮಾನರೇ ಎಂದು ಅವರು ಹೇಳುತ್ತಾರೆ.

ಮುಸ್ಲಿಂ ಸಮುದಾಯದ ಮಹಿಳೆಯರು ತಮ್ಮ ಹೋಟೆಲ್ ನಲ್ಲಿ ಇದುವರೆಗೆ ಊಟ ಮಾಡಿಲ್ಲವೆಂದು ನಂಜಪ್ಪ ಹೇಳುತ್ತಾರೆ. ಸಮುದಾಯದ ಪುರುಷರು ಹಲಾಲ್ ಕಟ್ ಅಂತ ಕೇಳಿ ತಿಳಿದುಕೊಂಡು ಊಟ ಮಾಡುತ್ತಾರೆ, ಅದರೆ ಮಹಿಳೆಯರು ಮಾತ್ರ ಮಾಡೋದೇ ಇಲ್ಲ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:  ಬೆಂಗಳೂರಿನ ಈ ಗೌಡಾಸ್ ಹೋಟೆಲ್ ನಲ್ಲಿ ಹಲಾಲ್ ಕಟ್ ಮಾಂಸಕ್ಕೆ ಆಸ್ಪದವೇ ಇಲ್ಲ ಅನ್ನುತ್ತಾರೆ ಗ್ರಾಹಕರು

Published on: Mar 30, 2022 05:57 PM