ಸಾರಿಗೆ ಕಚೇರಿಯಲ್ಲಿ ದರ್ಪ ಪ್ರದರ್ಶಿಸಿದ ಖಾಸಗಿ ಬಸ್ ಸಂಸ್ಥೆ ಮಾಲೀಕ, ಮಹಿಳಾ ಅಧಿಕಾರಿಯಿಂದ ಪೊಲೀಸ್ ದೂರು
ಸಾರಿಗೆ ಅಧಿಕಾರಿಗಳು ಕೇವಲ ತನ್ನ ಬಸ್ಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ, ತನ್ನ ವಾಹನಗಳಿಗೆ ಮಾತ್ರ ದಂಡ ಬೀಳುತ್ತಿದೆ ಪೋನ್ ಮಾಡಿದರೂ ಸಾರಿಖೆ ಜಂಟಿ ಆಯುಕ್ತರು ಕರೆಯನ್ನು ಸ್ವೀಕರಿಸುವುದಿಲ್ಲ ಎಂದು ಬಸ್ ಮಾಲೀಕ ಸಾರಿಗೆ ಕಚೇರಿಯಲ್ಲಿ ಕೂಗಾಡಿದ್ದಾನಂತೆ. ಅವನ ಸಮಸ್ಯೆ ಏನೇ ಇದ್ದರೂ ಚಿಕ್ಕಬಳ್ಳಾಪುರದ ಸಾರಿಗೆ ಕಚೇರಿಗೆ ಹೋಗಿ ತನ್ನ ದೂರು ಹೇಳಿಕೊಳ್ಳಬೇಕಿತ್ತು ಎಂದು ಗಾಯತ್ರಿ ದೇವಿ ಹೇಳುತ್ತಾರೆ.
ಚಿಕ್ಕಬಳ್ಳಾಪುರ, ಜುಲೈ 1: ನಮ್ಮ ವರದಿಗಾರನೊಂದಿಗೆ ಮಾತಾಡುತ್ತಿಉವ ಇವರು ಚಿಕ್ಕಬಳ್ಳಾಪುರ ಸಾರಿಗೆ ಕಚೇರಿಯಲ್ಲಿ (transport office) ದೊಡ್ಡ ಹುದ್ದೆಯಲ್ಲಿದ್ದಾರೆ-ಜಂಟಿ ಆಯುಕ್ತೆ, ಹೆಸರು ಗಾಯತ್ರಿ ದೇವಿ. ಖಾಸಗಿ ಬಸ್ಗಳ ಟ್ರಾವೆಲ್ಸ್ ಸಂಸ್ಥೆಯೊಂದನ್ನು ನಡೆಸುವ ಮಾಲೀಕನೊಬ್ಬ ನಿನ್ನೆ ಈ ಅಧಿಕಾರಿಯೊಂದಿಗೆ ದರ್ಪದಿಂದ ಮಾತಾಡಿದ್ದಾನೆ ಮತ್ತು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಇದೇ ಹಿನ್ನೆಲೆಯಲ್ಲಿ ಗಾಯತ್ರಿ ದೇವಿ ಚಿಂತಾಮಣಿ ಪೊಲೀಸ್ ಸ್ಟೇಶನ್ನಲ್ಲಿ ಬಸ್ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದಾರೆ. ಅವನ್ಯಾರೆಂದು ತನಗೆ ಗೊತ್ತಿಲ್ಲ, ತನಗೆ ಸಂಬಂಧಪಟ್ಟ ಸಾರಿಗೆ ಕಚೇರಿಗೆ ಅವನು ಹೋಗಬೇಕಿತ್ತು, ಮಹಿಳಾ ಅಧಿಕಾರಿಯನ್ನು ಮನಬಂದಂತೆ ಬಯ್ಯುವ ಅವನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಗಾಯತ್ರಿದೇವಿ ಹೇಳುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ