‘ಪಾರುಗೆ ನೀವು ಮದ್ವೆ ಮಾಡ್ಸಿ ಎಂದು ಅಭಿಮಾನಿ ಕಣ್ಣು ಕೆಂಪು ಮಾಡ್ಕೊಂಡು ಹೇಳಿದ್ರು’; ಎಸ್​. ನಾರಾಯಣ್​

| Updated By: ರಾಜೇಶ್ ದುಗ್ಗುಮನೆ

Updated on: Feb 24, 2022 | 7:33 PM

ಪಾರು ಹಾಗೂ ಆದಿತ್ಯನ ಮದುವೆ ಮಾಡಿಸಬೇಕು ಎಂಬುದು ವೀರಯ್ಯ ದೇವನ ಉದ್ದೇಶ. ಈ ಕಾರಣಕ್ಕೆ ಪ್ರಮುಖ ಸಂದರ್ಭದಲ್ಲಿ ವೀರಯ್ಯ ದೇವನ ಎಂಟ್ರಿ ಆಗುತ್ತದೆ. ಈ ಧಾರಾವಾಹಿಯಿಂದ ಎಸ್​. ನಾರಾಯಣ ಅವರಿಗೆ ಸಾಕಷ್ಟು ಖ್ಯಾತಿ ಬಂದಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ಪಾರು’ ಧಾರಾವಾಹಿ (Paaru Serial) ಹೊಸಹೊಸ ಟ್ವಿಸ್ಟ್​ಗಳನ್ನು ಪಡೆದುಕೊಂಡು ಸಾಗುತ್ತಿದೆ. ಇಡೀ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಕಥೆಯ ಹೀರೋ ಆದಿತ್ಯ ಹಾಗೂ ಪಾರು ಮದುವೆ ಆಗಿದ್ದಾರೆ ಎನ್ನುವುದು ಅಖಿಲಾಂಡೇಶ್ವರಿಗೆ ಗೊತ್ತಾಗಿದೆ. ಈ ಮೂಲಕ ಯಾಮಿನಿ ಜತೆ ನಡೆಯಬೇಕಿದ್ದ ಆದಿತ್ಯನ ಮದುವೆ ಮುರಿದು ಬಿದ್ದಿದೆ. ಪಾರು ಹಾಗೂ ಆದಿತ್ಯನ ಮದುವೆ ಮಾಡಿಸಬೇಕು ಎಂಬುದು ವೀರಯ್ಯ ದೇವನ ಉದ್ದೇಶ. ಈ ಕಾರಣಕ್ಕೆ ಪ್ರಮುಖ ಸಂದರ್ಭದಲ್ಲಿ ವೀರಯ್ಯ ದೇವನ (Veerayya Deva) ಎಂಟ್ರಿ ಆಗುತ್ತದೆ. ಈ ಧಾರಾವಾಹಿಯಿಂದ ಎಸ್​. ನಾರಾಯಣ ಅವರಿಗೆ ಸಾಕಷ್ಟು ಖ್ಯಾತಿ ಬಂದಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ವೀರಯ್ಯ ದೇವನ ಪಾತ್ರ ಅಷ್ಟೊಂದು ಖ್ಯಾತಿ ತಂದುಕೊಡುತ್ತದೆ ಎಂದು ಭಾವಿಸಿರಲಿಲ್ಲ. ತಿಂಗಳ ಹಿಂದೆ ಒಮ್ಮೆ ಅಭಿಮಾನಿ ಸಿಕ್ಕಿದ್ದರು. ನೀವು ಪಾರು-ಆದಿತ್ಯನ ಮದುವೆ ಮಾಡಿಸಿ ಎಂದು ಕಣ್ಣು ಕೆಂಪುಮಾಡಿಕೊಂಡು ಹೇಳಿದ್ದರು’ ಎಂದು ಹಳೆಯ ಘಟನೆ ನೆನೆದಿದ್ದಾರೆ.

ಇದನ್ನೂ ಓದಿ: ‘ಪಾರು’ ಕಥೆಗೆ ಟ್ವಿಸ್ಟ್​ ನೀಡಲು ಮತ್ತೆ ಬಂದ ಎಸ್​. ನಾರಾಯಣ್​; ರೋಚಕತೆ ಮೂಡಿಸಿದ ಎಪಿಸೋಡ್​

‘ಪಾರು’ ಧಾರಾವಾಹಿಯಲ್ಲಿ ಸಖತ್​ ಆ್ಯಕ್ಷನ್​; ಆದಿ ಮದುವೆಗೆ ಅಡ್ಡಿ ಆದ ಅರುಂಧತಿ

Published on: Feb 24, 2022 07:32 PM