ಕೊಡಗು: ತೋಟಕ್ಕೆ ನುಗ್ಗಿ ನೂರಾರು ಅಡಕೆ ಮತ್ತು ಬಾಳೆಗಿಡಗಳನ್ನು ನಾಶಮಾಡಿದ ಕಾಡಾನೆಗಳ ಹಿಂಡು
ಕೊಡಗು, ಹಾಸನ, ಚಾಮರಾಜಪೇಟೆ ಮೊದಲಾದ ಜಿಲ್ಲೆಗಳ ಅರಣ್ಯಪ್ರದೇಶಗಳಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ವನ್ಯಜೀವಿಗಳ ಉಪಟಳ ಹೆಚ್ಚಾಗುತ್ತಿದೆ. ಚಿರತೆಗಳು ಗ್ರಾಮಗಳಿಗೆ ನುಗ್ಗಿ ಸಾಕುಪ್ರಾಣಿಗಳನ್ನು ಎತ್ತಿಕೊಂಡು ಹೋಗುವುದು, ಕಾಡಾನೆಗಳು ಗ್ರಾಮ ಮತ್ತು ತೋಟ, ಹೊಲ-ಗದ್ದೆಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ.
ಮಡಿಕೇರಿ: ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಿಳಿಗುಂದ ಗ್ರಾಮದ ಹೊಸಕೋಟೆಯಲ್ಲಿ ಕಾಡಾನೆಗಳ ಗುಂಪೊಂದು ತೋಟಕ್ಕೆ ನುಗ್ಗಿ ಸುಮಾರು 150 ಅಡಿಕೆ ಮರ ಮತ್ತು 200 ರಷ್ಟು ಬಾಳೆಗಿಡಗಳನ್ನು ಧ್ವಂಸ ಮಾಡಿದೆ. ಗ್ರಾಮಸ್ಥರು ಕಾಡಾನೆ ಹಾವಳಿ ಬಗ್ಗೆ ಪದೇಪದೆ ದೂರಿದರೂ ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದನ್ನು ದೃಶ್ಯಗಳಲ್ಲಿ ಗಮನಿಸಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಿಲ್ಯಾಕ್ಸ್ ಮೂಡ್ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್ನಲ್ಲಿ ಸೆರೆ