ಬಿಜೆಪಿ ಜೆಡಿಎಸ್ ಪಾದಯಾತ್ರೆ: ಕಾರ್ಯಕರ್ತರ ಜತೆ ಆರ್ ಅಶೋಕ್, ಸಿಟಿ ರವಿ ಸಖತ್ ಡ್ಯಾನ್ಸ್

| Updated By: Ganapathi Sharma

Updated on: Aug 06, 2024 | 2:32 PM

ಬಿಜೆಪಿ ಜೆಡಿಎಸ್ ಪಾದಯಾತ್ರೆ ಮಂಡ್ಯದ ಮದ್ದೂರು ತಲುಪಿದ್ದು, ಇದೇ ವೇಳೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮತ್ತು ವಿಧಾನಪರಿಷತ್ ಸದಸ್ಯ ಸಿಟಿ ರವಿ ಡ್ಯಾನ್ಸ್ ಮಾಡುವ ಮೂಲಕ ಕಾರ್ಯಕರ್ತರಿಗೆ ಹುರುಪು ತುಂಬಿದರು. ಕಾರ್ಯಕರ್ತರ ಜತೆ ಉಭಯ ನಾಯಕರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇಲ್ಲಿದೆ ನೋಡಿ.

ಮಂಡ್ಯ, ಆಗಸ್ಟ್ 6: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ 4ನೇ ದಿನವೂ ಮುಂದುವರಿದಿದ್ದು, ಮಂಗಳವಾರ ಮಧ್ಯಾಹ್ನ ಮಂಡ್ಯ ಜಿಲ್ಲೆಯ ಮದ್ದೂರು ತಲುಪಿತು. ಇದೇ ವೇಳೆ ಪಾದಯಾತ್ರೆ ನಡುವೆ ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್, ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ಮಾಜಿ ಸಚಿವ ರಾಜೂ ಗೌಡ ಮತ್ತು ಶಾಸಕ ಪ್ರಭು ಚೌಹಾಣ್ ಡ್ಯಾನ್ಸ್ ಮಾಡಿ ಗಮನ ಸೆಳೆದರು. ಕಾರ್ಯಕರ್ತರ ಜತೆ ಡ್ಯಾನ್ಸ್ ಮಾಡುವ ಮೂಲಕ ಅವರನ್ನು ಹುರಿದುಂಬಿಸಿದರು.

ಇದನ್ನೂ ಓದಿ: ನಿಮ್ಮ ಅಪ್ಪನ್ನನ್ನು ಏಕೆ ಜೈಲಿಗೆ ಕಳುಹಿಸಿದೆ? ವಿಜಯೇಂದ್ರಗೆ ಡಿಕೆ ಶಿವಕುಮಾರ್​ ಪ್ರಶ್ನೆ

ಡ್ಯಾನ್ಸ್ ವೇಳೆ ಆರ್ ಅಶೋಕ್ ಕಾರ್ಯಕರ್ತನೊಬ್ಬನನ್ನು ತಳ್ಳಿದ ಘಟನೆಯೂ ಸಂಭವಿಸಿತು. ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾರ್ಯಕರ್ತನನ್ನು ಸಮಾಧಾನಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ