ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ

Updated on: Apr 24, 2025 | 4:58 PM

ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಗೆ ಶಿವಮೊಗ್ಗದ ಮಂಜುನಾಥ್ ಬಲಿಯಾಗಿದ್ದು, ಅವರ ಅಂತ್ಯಕ್ರಿಯೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನೆಡೆಯಿತು. ಇನ್ನು​​ ಅಂತ್ಯಕ್ರಿಯೆಗೂ ಮುನ್ನ ಅವರ ಪತ್ನಿ ಕೊನೆಯ ಬಾರಿಗೆ ಪತಿಯ ಕೈಹಿಡಿದು ಕಣ್ಣೀರಿಟ್ಟ ಪ್ರಸಂಗ ಎಂತಹ ಕಟು ಹೃದಯದವರನ್ನು ಕೂಡ ಕರಗಿಸುವಂತಹ ಕ್ಷಣಕ್ಕೆ ಸಾಕ್ಷಿಯಾಯ್ತು. ಪತ್ನಿ ಪಲ್ಲವಿಯ ಅಳು ನೋಡುತ್ತಿದ್ದ ನೆರೆದಿದ್ದವರ ಕಣ್ಣಾಲಿಗಳು ಕೂಡ ತೇವವಾಗಿದ್ದವು.

ಶಿವಮೊಗ್ಗ, (ಏಪ್ರಿಲ್ 24): ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಗೆ ಜೀವ ಕಳೆದುಕೊಂಡ ಕನ್ನಡಿಗರ ಅಂತ್ಯಕ್ರಿಯೆ ನೆರವೇರಿದೆ. ಮಂಜುನಾಥ್ ರಾವ್ ಅವರ ಅಂತ್ಯಕ್ರಿಯೆ ಶಿವಮೊಗ್ಗದಲ್ಲಿ ನಡೆದರೆ ಭರತ್ ಭೂಷಣ್ ಅವರ ಅಂತ್ಯಕ್ರಿಯೆ ಬೆಂಗಲುಋಈಣ ಹೆಬ್ಬಾಳ ವಿದ್ಯುತ್ ಚಿತಾಗಾರದಲ್ಲಿ ನೆರವೇರಿತು. ಆದ್ರೆ, ಮಂಜುನಾಥ್​​ ಅಂತ್ಯಕ್ರಿಯೆಗೂ ಮುನ್ನ ಅವರ ಪತ್ನಿ ಕೊನೆಯ ಬಾರಿಗೆ ಪತಿಯ ಕೈಹಿಡಿದು ಕಣ್ಣೀರಿಟ್ಟ ಪ್ರಸಂಗ ಎಂತಹ ಕಟು ಹೃದಯದವರನ್ನು ಕೂಡ ಕರಗಿಸುವಂತಹ ಕ್ಷಣಕ್ಕೆ ಸಾಕ್ಷಿಯಾಯ್ತು. ಇಷ್ಟು ವರ್ಷ ಕಷ್ಟು ಸುಖಗಳ ನಡುವೆ ಬಾಳಿ ಬದುಕ್ಕಿದ್ದವರು ಈಗ ಏಕಾಏಕಿ ಬಿಟ್ಟು ಹೋಗುತ್ತಾರೆ ಅಂದರೆ ಕಷ್ಟು ಊಹಿಸಿಕೊಳ್ಳಲು ಅಸಾಧ್ಯ. ಪತಿ ಮಂಜುನಾಥ್​ ಅವರನ್ನ ಇನ್ಯಾವತ್ತೂ ನೋಡಲು ಸಾಧ್ಯವಿಲ್ಲ ಎಂದು ಪತ್ನಿ ಪಲ್ಲವಿಯ ದುಖ ನೆರೆದಿದ್ದವರ ಕಣ್ಣಾಲಿಗಳು ಕೂಡ ತೇವವಾಗಿದ್ದವು.