ಕಾಲು ಕೆದರಿ ಜಗಳಕ್ಕೆ ಬರುತ್ತಿರುವ ಪಾಕಿಸ್ತಾನದ ಸೇನೆಯಿಂದ ಪುನಃ ಗಡಿಭಾದಲ್ಲಿ ಗುಂಡಿನ ದಾಳಿ

Updated on: May 05, 2025 | 11:31 AM

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೇನೆ ಮತ್ತು ಸಿಡಿಎಸ್ ಜೊತೆ ಸಭೆ ನಡೆಸಿ ಯುದ್ಧ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವ ಮುಕ್ತ ಅವಕಾಶವನ್ನು ಸೇನಾ ಮುಖ್ಯಸ್ಥರಿಗೆ ನೀಡಿದ ಬಳಿಕ ಎಲ್ಲ ಮೂರು ಪಡೆಗಳು ಸಮರಭ್ಯಾಸವನ್ನು ಶುರು ಮಾಡಿವೆ. ಗಡಿ ಭದ್ರತಾ ದಳದವರು ಎಲ್​ಓಸಿ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ ಮತ್ತು ಶತ್ರುಗಳ ಚಲನವಲನಗಳನ್ನು ಗಮನಿಸುತ್ತಿದ್ದಾರೆ.

ಬೆಂಗಳೂರು, ಮೇ 5: ನೆರೆರಾಷ್ಟ್ರ ಪಾಕಿಸ್ತಾನಕ್ಕೆ ದುಷ್ಟತನ, ದುರಳತನ ಮತ್ತು ಧೂರ್ತತನ ಬಿಟ್ಟರೆ ಬೇರೆ ಯಾವ ವಿಷಯವೂ ಗೊತ್ತಿದ್ದಂತಿಲ್ಲ. ಪಹಲ್ಗಾಮ್ ನಲ್ಲಿ ಪಾಕಿಸ್ತಾನ ಪ್ರಾಯೋಜಕತ್ವದ ಉಗ್ರರ ದಾಳಿ ನಡೆದು ಎರಡು ವಾರ ಕಳೆದಿದೆ ಮತ್ತು ಕಳೆದ 11 ದಿನಗಳಿಂದ ಪಾಕ್ ಸೇನೆ ಗಡಿಭಾಗದಲ್ಲಿ ಅಪ್ರಚೋದಿತ ಗುಂಡಿನ ದಾಳಿ (unprovoked firing) ನಡೆಸಿ ಭಾರತವನ್ನು ಕೆಣಕುವ ಪ್ರಯತ್ನ ಮಾಡುತ್ತಿದೆ. ಭಾರತೀಯ ಸೇನೆ ಪ್ರತಿದಾಳಿ ನಡೆಸಿ ತಕ್ಕ ಉತ್ತರ ನೀಡುತ್ತಿದೆ ಅದು ಬೇರೆ ವಿಚಾರ. ಅದರೆ, ಭಾರತ ಪೂರ್ಣ ಪ್ರಮಾಣದ ಯುದ್ಧ ಲಾಂಚ್ ಮಾಡಿದರೆ ಪಾಕಿಸ್ತಾನ ಒಂದು ವಾರ ಕೂಡ ದಾಳಿಯನ್ನು ಎದುರಿಸಲಾರದು. ಹಿಂದಿನ ಯುದ್ಧಗಳಿಂದ ಪುಂಡ ಮತ್ತು ಮೂರ್ಖ ದೇಶ ಪಾಠ ಕಲಿತಂತಿಲ್ಲ.

ಇದನ್ನೂ ಓದಿ:  ಚೆನೈನಿಂದ ಶ್ರೀಲಂಕಾ ಪರಾರಿಯಾದರೇ ಪಹಲ್ಗಾಮ್ ನಲ್ಲಿ 26 ಅಮಾಯಕರನ್ನು ಕೊಂದ ಉಗ್ರರು?

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 05, 2025 11:28 AM