ಪಾಕಿಸ್ತಾನ ಸರ್ಕಾರದ ಹೊಸ ವರಸೆ, ಉಗ್ರರಿಗೆ ಕ್ಷಮಾದಾನ ಮತ್ತು ಮುಖ್ಯವಾಹಿನಿಗೆ ಬರುವ ಅವಕಾಶ!
ಆದರೆ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ ಎಸ್ ಎ) ಮೊಯೀದ್ ಯೂಸುಫ್ ಈ ಮಾತನ್ನು ತಳ್ಳಿ ಹಾಕಿದ್ದಾರೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಆ ದೇಶದಿಂದ ಟಿಟಿಪಿಯನ್ನು ಬಹಿಷ್ಕರಿಸಲಾಗಿದೆ.
ಪಾಕಿಸ್ತಾನ ತಾನು ಆಶ್ರಯ ನೀಡಿರುವ ಉಗ್ರಗಾಮಿ ಮತ್ತ ಉಗ್ರ ಸಂಘಟನೆಗಳೆಡೆ ತನ್ನ ವರಸೆ ಬದಲಾಯಿಸಿರುವುದು ಎಲ್ಲರಲ್ಲೂ ಆಶ್ಚರ್ಯ ಹುಟ್ಟಿಸುತ್ತಿದೆ. ಈಗ ಪಾಕಿಸ್ತಾನದಲ್ಲಿ ಚರ್ಚೆಯಲ್ಲಿರುವ ವಿಷಯವೇನೆಂದರೆ, ಭಯೋತ್ಪಾದನೆ ಚಟುವಟಿಕೆಗಳನ್ನು ಬಿಟ್ಟು ಉಳಿದವರಂತೆ ಸಾಮಾನ್ಯ ಬದುಕು ನಡೆಸಲಿಚ್ಛಿಸಿ ಮುಖ್ಯವಾಹಿನಿಗೆ ಸೇರಬಯಸುವ ಉಗ್ರರಿಗೆ ಕ್ಷಮಾದಾನ ನೀಡಿ ಎಲ್ಲರಂತೆ ಬದುಕುವ ಅವಕಾಶ ನೀಡುವುದಾಗಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಅದು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಹೆಸರಿನ ಸಂಘಟನೆಯೊಂದಿಗೆ ಮಾತುಕತೆಯಲ್ಲೂ ತೊಡಗಿದೆಯಂತೆ.
ಆದರೆ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ ಎಸ್ ಎ) ಮೊಯೀದ್ ಯೂಸುಫ್ ಈ ಮಾತನ್ನು ತಳ್ಳಿ ಹಾಕಿದ್ದಾರೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಆ ದೇಶದಿಂದ ಟಿಟಿಪಿಯನ್ನು ಬಹಿಷ್ಕರಿಸಲಾಗಿದೆ.
‘ಈ ವಿಚಾರ ಹೇಗೆ ಉದ್ಭವಿಸಿತು ಅಂತ ನನಗೆ ಅರ್ಥವಾಗುತ್ತಿಲ್ಲ. ಉಗ್ರರಿಗೆ ಕ್ಷಮಾದಾನ ನೀಡುವ ಬಗ್ಗೆ ಯಾವ ನಿರ್ಣಯವನ್ನು ಸರ್ಕಾರ ತೆಗೆದುಕೊಂಡಿಲ್ಲ,’ ಎಂದು ಟಿವಿಯೊಂದರ ಜೊತೆ ನಡೆಸಿದ ಮಾತುಕತೆಯಲ್ಲಿ ಯೂಸುಫ್ ಹೇಳಿದ್ದಾರೆ. ಭವಿಷ್ಯದಲ್ಲಿ ಉಗ್ರರ ಜೊತೆ ಮಾತುಕತೆ ನಡೆಸಿ ಕ್ಷಮಾದಾನ ಒದಗಿಸಬಹುದಾದ ಸಾಧ್ಯತೆಯನ್ನು ಯೂಸುಫ್ ಅಲ್ಲಗಳೆಯಲಿಲ್ಲ.
ಉಗ್ರರ ಜೊತೆ ಮಾತುಕತೆ ನಡೆಸುವ ಸರ್ಕಾರದ ನಿರ್ಧಾರವನ್ನು ಯೂಸುಫ್ ಸಮರ್ಥಿಸಿಕೊಳ್ಳುತ್ತಾರೆ. ‘ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಸ್ಥಿತಿಯಲ್ಲಿ ಬದಲಾವಣೆಯಾಗಿದೆ. ಅಶ್ರಫ್ ಘನಿ ಅವರ ಸರ್ಕಾರದ ಹಾಗೆ ತಾಲಿಬಾನ್ ಸರ್ಕಾರ ಪಾಕಿಸ್ತಾನದೆಡೆ ಕಠಿಣ ನಿಲುವು ತಳೆದಿಲ್ಲ. ಟಿಟಿಪಿಗೆ ಮೊದಲಿನ ಹಾಗೆ ಇಂಡಿಯ ಮತ್ತ್ತು ಅಶ್ರಫ್ ಘನಿಯ ಸರ್ಕಾರದ ವತಿಯಿಂದ ಸಿಗುತ್ತಿದ್ದ ಬೆಂಬಲ ಈಗ ಸಿಗುತ್ತಿಲ್ಲವಾದ್ದರಿಂದ ಅ ಸಂಘಟನೆಯೊಂದಿಗೆ ಮಾತುಕತೆ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ,’ ಎಂದು ಯೂಸುಫ್ ಹೇಳಿದ್ದಾರೆ.
ಯೂಸುಫ್ ಮಾತಿನ ವರಸೆ ನೋಡಿ ಹೇಗಿದೆ. ಟಿಟಿಪಿಗೆ ಭಾರತ ಸರ್ಕಾರ ನೆರವು ನೀಡುತ್ತಿತ್ತು ಅಂತ ಅವರು ಹೇಳುತ್ತಿದ್ದಾರೆ! ಈ ಮನುಷ್ಯನ ಬುದ್ಧಿಗೆ ಮಂಕು ಕವಿದಂತಿದೆ. ಭಾರತದ ಬಗ್ಗೆ ಅವರಿಗೆ ತಿಳುವಳಿಕೆ ಕಮ್ಮಿ ಅನ್ನೋದು ಅವರ ಮಾತಿನಲ್ಲಿ ವ್ಯಕ್ತವಾಗುತ್ತಿದೆ. ಭಾರತ ಯಾವುದಾದರೂ ದೇಶದೊಂದಿದೆ ವೈರತ್ವ ಸಾಧಿಸಬೇಕಾದರೆ ನೇರಾನೇರ ಅದನ್ನು ಮಾಡುತ್ತದೆ. ಉಗ್ರರಂಥ ದಲ್ಲಾಳಿಗಳ ಅವಶ್ಯಕತೆ ಅದಕ್ಕಿಲ್ಲ. ಯೂಸುಫ್ ನಂಥ ಮಂಕುಬೂದಿಗೆ ಅದು ಅರ್ಥವಾಗಲಾರದು ಬಿಡಿ.
ಇದನ್ನೂ ಓದಿ: ಅಪ್ಪು ಸಮಾಧಿ ಮುಂದೆ ಅತ್ತು ಗೋಳಾಡಿದ ಮಹಿಳೆ; ಅಭಿಮಾನಿಗಳ ನೋವಿಗೆ ಈ ವಿಡಿಯೋ ಸಾಕ್ಷಿ