Karnataka Assembly Session:  ಪ್ರತಿಭಟನೆಗೆ ಟ್ರ್ಯಾಕ್ಟರ್​ಗಳನ್ನು ತರೋದು ಅಪರಾಧವೇ? ಪಂಚಮಸಾಲಿಗಳೇನು ಭಯೋತ್ಪಾದಕರೇ? ಯತ್ನಾಳ್

Karnataka Assembly Session: ಪ್ರತಿಭಟನೆಗೆ ಟ್ರ್ಯಾಕ್ಟರ್​ಗಳನ್ನು ತರೋದು ಅಪರಾಧವೇ? ಪಂಚಮಸಾಲಿಗಳೇನು ಭಯೋತ್ಪಾದಕರೇ? ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 12, 2024 | 7:16 PM

Karnataka Assembly Session: ಸದನದ ಕಾರ್ಯಕಲಾಪ ನಡೆಯುವಾಗ ವಿರೋಧ ಪಕ್ಷದ ಶಾಸಕರು ಕೇಳುವ ಪ್ರಶ್ನೆಗಳಿಗೆ ಸಂಬಂಧಪಟ್ಟ ಸಚಿವರು ಉತ್ತರಿಸಬೇಕು, ಅದರೆ ಇಲ್ಲಿ ಆಡಳಿತ ಪಕ್ಷದ ಶಾಸಕರೆಲ್ಲ ಉತ್ತರ ನೀಡಲು ಅಥವಾ ಪ್ರಶ್ನೆ ಕೇಳುವುದನ್ನು ತಡೆಯಲು ಮುಂದಾಗುತ್ತಿದ್ದಾರೆ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರೂ ಎದ್ದು ನಿಂತು ಉತ್ತರ ನೀಡುವ ಕೆಲಸ ಮಾಡುತ್ತಿದ್ದಾರೆ, ಸದನದ ಸಮಯ ಅವರಿಂದ ಹಾಳಾಗುತ್ತಿದೆ ಎಂದು ಯತ್ನಾಳ್ ಹೇಳಿದರು.

ಬೆಳಗಾವಿ: ಸದನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತಾಡಲು ಎದ್ದು ನಿಂತಾಗ ಅಡಳಿತ ಪಕ್ಷದ ನಾಯಕರು ಗಲಾಟೆ ಮಾಡೋದನ್ನು ನಿಲ್ಲಿಸಿದ್ದು ಆಶ್ಚರ್ಯ ಮೂಡಿಸಿತು. ಪಂಚಮಸಾಲಿ ಪ್ರತಿಭಟನೆಕಾರರ ಮೇಲೆ ನಡೆದ ಪೊಲೀಸ್ ಹಲ್ಲೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಗೃಹ ಮಂತ್ರಿಗಳಿಂದ ಸ್ಪಷ್ಟನೆ ನಿರೀಕ್ಷಿಸಿದ್ದೆವು, ಅವರ ಸ್ಪಷ್ಟನೆ ಸಮಾಧಾನಕವಾಗಿಲ್ಲ, ಪ್ರತಿಭಟನೆಕಾರರನ್ನು ಭಯೋತ್ತಾದಕರಂತೆ ಟ್ರೀಟ್ ಮಾಡಿದ್ದು ಯಾಕೆ? ಟ್ರ್ಯಾಕ್ಟರ್ ಗಳನ್ನು ತಂದು ಪ್ರತಿಭಟನೆ ನಡೆಸೋದು ತಪ್ಪಾ? ಖಾಲಿಸ್ತಾನಿಗಳ ಹಾಗೆ ತಾವೇನಾರೂ ಧ್ಚಜ ಹಾರಿಸುವ ಪ್ರಯತ್ನ ಮಾಡಿದ್ದೇವಾ ಎಂದು ಯತ್ನಾಳ್ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಯತ್ನಾಳ್​, ತೇಜಸ್ವಿ ಸೂರ್ಯ ವಿರುದ್ಧದ ಕೇಸ್​ ರದ್ದುಗೊಳಿಸಿದ ಹೈಕೋರ್ಟ್​: ಪ್ರಕರಣವೇನು?