ಮೈಸೂರು ಅರಮನೆ ಸುತ್ತಲಿನ ಕೋಟೆಯ ಗೋಡೆ ಕುಸಿತ, ಜನರಲ್ಲಿ ಆತಂಕ
ರಾಜ್ಯಾದ್ಯಂತ ಈಗಲೂ ಸುರಿಯುತ್ತಿರುವ ಮಳೆ ರಾಜ್ಯದ ಸಾಂಸ್ಕೃತಿಕ ನಗರಿಯನ್ನೇನೂ ಬಿಟ್ಟಿಲ್ಲ. ಕೋಟೆ ಹೊರಭಾಗದ ಗೋಡೆ ಶಿಥಿಲಗೊಂಡಿರುವಂತೆ ಕಾಣುವುದನ್ನು ನೋಡಬಹುದು.
ಮೈಸೂರು ಅರಮನೆ (Mysuru palace) ಸುತ್ತಲಿನ ಕೋಟೆಯ ಮಾರಮ್ಮ (Kote Maramma) ದೇವಾಲಯ ಮತ್ತು ಜಯ ಮಾರ್ತಾಂಡ ದ್ವಾರದ ನಡುಭಾಗದ ಗೋಡೆ ಕುಸಿದು ಜನರಲ್ಲಿ ಆತಂಕ ಮೂಡಿಸಿದೆ. ಕೋಟೆ ಸುತ್ತ ಇರುವ ಗೋಡೆ ಒಂದರ್ಥದಲ್ಲಿ ಅದಕ್ಕೆ ಅರಮನೆಗೆ ರಕ್ಷಣಾ ಕವಚ, ಗುರಾಣಿಯಂತೆ ಭಾಸವಾಗುತ್ತಿತ್ತು. ಇದನ್ನು ನೂರಾರು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ರಾಜ್ಯಾದ್ಯಂತ ಈಗಲೂ ಸುರಿಯುತ್ತಿರುವ ಮಳೆ ರಾಜ್ಯದ ಸಾಂಸ್ಕೃತಿಕ ನಗರಿಯನ್ನೇನೂ ಬಿಟ್ಟಿಲ್ಲ. ಕೋಟೆ ಹೊರಭಾಗದ ಗೋಡೆ ಶಿಥಿಲಗೊಂಡಿರುವಂತೆ ಕಾಣುವುದನ್ನು ನೋಡಬಹುದು.