Loading video

ಪ್ರಯಾಗ್​ರಾಜ್​ನಲ್ಲಿ ಸೇತುವೆ ಮೇಲೆ ನಿಂತಾಗ ಯಮುನೆಯಲ್ಲಿ ಕಾಣುವ ದೋಣಿ ಸಂಚಾರದ ವಿಹಂಗಮ ದೃಶ್ಯ ನಯನಮನೋಹರ

|

Updated on: Feb 26, 2025 | 2:16 PM

ಈ ಬಾರಿಯ ಮಹಾಕುಂಭಮೇಳದಲ್ಲಿ ಅಸಂಖ್ಯಾತ ಕನ್ನಡಿಗರು ಭಾಗಿಯಾಗಿರುವುದನ್ನು ಟಿವಿ9 ವರದಿ ಮಾಡಿದೆ. ಕೊನೆಯ ದಿನನವಾಗಿರುವ ಇಂದು ಸಹ ಪ್ರಯಾಗ್​ರಾಜ್​ನಲ್ಲಿ ಕನ್ನಡಿಗರಿದ್ದಾರೆ. ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಅವರು, ಸೇತುವೆಯ ಮೇಲಿಂದ ಯಮುನಾ ನದಿಯಲ್ಲಿ ಕಾಣುತ್ತಿರುವ ದೃಶ್ಯವನ್ನು ಸ್ವರ್ಗಕ್ಕೆ ಹೋಲಿಸುತ್ತಾರೆ. ಇಲ್ಲಿಗೆ ಬಂದ ಬಳಿಕ ಹಿಂದೂ ಆಚರಣೆಗಳ ಮೇಲಿನ ನಿಷ್ಠೆ ದುಪ್ಪಟ್ಟಾಯಿತು ಮತ್ತು ಬದುಕು ಪಾವನವಾಯಿತು ಎಂದು ಅವರು ಹೇಳುತ್ತಾರೆ.

ಪ್ರಯಾಗ್​ರಾಜ್ (ಉತ್ತರ ಪ್ರದೇಶ): ಮಹಾಕುಂಭಮೇಳದ ಕೊನೆಯದ ದಿನವಾಗಿರುವ ತ್ರಿವೇಣಿ ಸಂಗಮದಲ್ಲಿ ಇಂದು ನಡೆಯುವ ಪವಿತ್ರ ಸ್ನಾನ ಮತ್ತು ಜನರ ಭಕ್ತಿಯ ಇತರ ಆಯಾಮಗಳನ್ನು ವರದಿ ಮಾಡಲು ಟಿವಿ9 ಕನ್ನಡ ವಾಹಿನಿಯ ಪ್ರತಿನಿಧಿ ಅಲ್ಲಿಗೆ ತೆರಳಿದ್ದಾರೆ. ಬೆಳಗಿನ ಹೊತ್ತಲ್ಲಿ ಅವರು ಯಮುನಾ ನದಿಯ ವಿಹಂಗಮ ದೃಶ್ಯವನ್ನು ನಮಗೆ ನೀಡಿದ್ದಾರೆ. ನದಿಯಲ್ಲಿ ಚಿಕ್ಕ ಪುಟ್ಟ ದೋಣಿಗಳು ಒಂದು ದಡದಿಂದ ಮತ್ತೊಂದು ದಡಕ್ಕೆ ಸಾಗುತ್ತಿವೆ. ಯಮುನೆಯಲ್ಲಿ ಅಪಾರ ಸಂಖ್ಯೆಯ ಮೋಟಾರು ಬೋಟ್ ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿ ಹುಟ್ಟು ಹಾಕಿ ಮುಂದೆ ಸಾಗುವ ದೋಣಿಗಳ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮಹಾಕುಂಭಮೇಳದಲ್ಲಿ ವಿಜಯೇಂದ್ರನೂ ಭಾಗಿ, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ