ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ; ಪ್ರತೀಕಾರದ ರಾಜಕಾರಣ ಅಲ್ಲವೆಂದ ಸಚಿವ ಪರಮೇಶ್ವರ್

Updated on: Jul 19, 2025 | 11:36 AM

ಸಿದ್ದರಾಮಯ್ಯ ತಮ್ಮ ಶಾಸಕರಿಗೆ ಅನುದಾನ ಯಾವಾಗ ಬಿಡುಗಡೆ ಮಾಡಿದರು ಅನ್ನೋದು ಗಮನಿಸಬೇಕಾದ ಅಂಶ. ಕಾಂಗ್ರೆಸ್ ಶಾಸಕರು ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲವೆಂದು ಬಹಿರಂಗವಾಗೇ ಹೇಳಿಕೆ ನೀಡಲಾರಂಭಿಸಿದ ಬಳಿಕ ಪಕ್ಷದ ಹೈಕಮಾಂಡ್ ಮಧ್ಯಪ್ರವೇಶಿಸಬೇಕಾಯಿತು. ರಂದೀಪ್ ಸರ್ಜೇವಾಲಾ ಎಲ್ಲ ಶಾಸಕರ ಅಹವಾಲು ಕೇಳಿದ ಬಳಿಕ ಸಿಎಂ ಜೊತೆ ಮಾತಾಡಿದರು. ಅದಾದ ನಂತರವೇ ಅನುದಾನ ಬಿಡುಗಡೆಯಾಗಿದ್ದು!

ಬೆಂಗಳೂರು, ಜುಲೈ 19: ಕಾಂಗ್ರೆಸ್ ಸರ್ಕಾರ ಮಾಡುತ್ತಿರೋದು ಪ್ರತೀಕಾರದ ರಾಜಕಾರಣವೇ (revenge politics)? ಅಲ್ಲವೆನ್ನುತ್ತಾರೆ ಗೃಹ ಸಚಿವ ಜಿ ಪರಮೇಶ್ವರ್. ಅದರೆ ಅವರ ಮಾತಿನಲ್ಲಿ ದ್ವಂದ್ವತೆ ಅಡಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪಕ್ಷದ ಶಾಸಕರಿಗೆ ತಲಾ ಐವತ್ತವತ್ತು ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ವಿರೋಧ ಪಕ್ಷದ ಶಾಸಕರಿಗೆ ಇಲ್ಲ. ಹಿಂಗ್ಯಾಕೆ ಸರ್ ಅಂತ ಪರಮೇಶ್ವರ್ ಅವರನ್ನು ಕೇಳಿದರೆ, ವಿರೋಧ ಪಕ್ಷದ ಶಾಸಕರಿಗೆ ಅನುದಾನ ಬಿಡುಗಡೆ ಮಾಡಲ್ಲ ಅಂತೇನಾದರೂ ಸಿಎಂ ಹೇಳಿದ್ದಾರೆಯೇ? ಅವರಿಗೂ ಕೊಡುತ್ತಾರೆ. ಆದರೆ ಈ ಸಂಪ್ರದಾಯವನ್ನು ಶುರು ಮಾಡಿದ್ದು ಹಿಂದಿನ ಸರ್ಕಾರ, ಅವರ ಪಕ್ಷದ ಶಾಸಕರಿಗೆ ತಲಾ ₹50 ಕೋಟಿ ಅನುದಾನ ಬಿಡುಗಡೆ ಮಾಡಿದ್ದರೆ, ಕಾಂಗ್ರೆಸ್ ಶಾಸಕರಿಗೆ 25, 20 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿತ್ತು ಎಂದು ಪರಮೇಶ್ವರ್ ಹೇಳುತ್ತಾರೆ. ಕೊನೆಯಲ್ಲಿ ಅವರು ತಮ್ಮ ಸರ್ಕಾರ ರಿವೆಂಜ್ ಪಾಲಿಟಿಕ್ಸ್ ಮಾಡಲ್ಲ ಅನ್ನುತ್ತಾರೆ.

ಇದನ್ನೂ ಓದಿ:   ಬಿಕ್ಲು ಶಿವ ಕೊಲೆ ಕೇಸ್: ಭೈರತಿ ಬಸವರಾಜ ಕೈವಾಡ ಇದೆ ಎಂದವರೇ ಈಗ ಅವರ ಪಾತ್ರವೇನೂ ಇಲ್ಲವೆನ್ನುತ್ತಿದ್ದಾರೆ: ಪರಮೇಶ್ವರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ