Loading video

ಪರೀಕ್ಷಾ ಪೇ ಚರ್ಚಾದಲ್ಲಿ ಸದ್ಗುರು: ಮಕ್ಕಳಿಗೆ ನೀಡಿದ ಟಿಪ್ಸ್​ಗಳೇನು? ಇಲ್ಲಿವೆ ನೋಡಿ

|

Updated on: Feb 15, 2025 | 11:11 AM

ಪರೀಕ್ಷಾ ಪೇ ಚರ್ಚಾ 2025ರಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರು ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ನಿವಾರಿಸುವುದರ ಬಗ್ಗೆ ಮಾತನಾಡಿದ್ದಾರೆ. ಶಿಕ್ಷಣವು ಕೇವಲ ಪರೀಕ್ಷೆಗಳಲ್ಲ, ಜೀವನ ಕಲಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಪರೀಕ್ಷೆಗಳನ್ನು ಮೋಜಿನಿಂದ ಕೂಡಿಸುವುದು ಮತ್ತು ಧನಾತ್ಮಕ ಮನೋಭಾವವನ್ನು ಉಳಿಸಿಕೊಳ್ಳುವುದು ಒತ್ತಡ ನಿವಾರಣೆಗೆ ಸಹಾಯ ಮಾಡುತ್ತದೆ ಎಂದು ಸದ್ಗುರು ಸಲಹೆ ನೀಡಿದ್ದಾರೆ.

ನವದೆಹಲಿ, ಫೆಬ್ರವರಿ 15: ಪರೀಕ್ಷೆ ಬಂತು ಎಂದರೆ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಾರೆ. ಈ ಒತ್ತಡ ದೂರ ಮಾಡಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ‘ಪರೀಕ್ಷಾ ಪೆ ಚರ್ಚಾ’ (Pariksha Pe Charcha 2025) ಹೆಸರಿನ ಕಾರ್ಯಕ್ರಮ ಆರಂಭಿಸಿದ್ದಾರೆ. ಇದು 8ನೇ ವರ್ಷದ ಪರೀಕ್ಷಾ ಪೇ ಚರ್ಚೆಯಾಗಿದೆ. ಈ ಪರೀಕ್ಷಾ ಪೇ ಚರ್ಚಾದಲ್ಲಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಾತನಾಡಿರುವ ಸಂಚಿಕೆ ಪ್ರಸಾರವಾಗಿದೆ. ಇದೀಗ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸದ್ಗುರು ಜಗ್ಗಿ ವಾಸುದೇವ್ ಮಾತನಾಡಿದ್ದಾರೆ. ಸದ್ಗುರು ಜಗ್ಗಿ ವಾಸುದೇವ್ ಅವರು ಪರೀಕ್ಷೆಯ ಕಡೆ ಗಮನವನ್ನು ಹೆಚ್ಚಿಸಲು ಮತ್ತು ಒತ್ತಡ ನಿವಾರಣೆಕುರಿತು ಕೆಲವು ತಂತ್ರ​ಗಳನ್ನು​ ಮಕ್ಕಳಿಗೆ ಹೇಳಿಕೊಟ್ಟಿದ್ದಾರೆ.

ಸದ್ಗುರು ನೀಡಿರುವ ತಂತ್ರ​​ಗಳೇನು?

  1. ಸದ್ಗುರುಗಳು ಹೇಳಿದಂತೆ ಶಿಕ್ಷಣ ಎಂದರೆ ಕೇವಲ ಪರೀಕ್ಷೆಗಳಲ್ಲ, ಅದು ಜೀವನವನ್ನು ಹೇಗೆ ನಡೆಸಬೇಕೆಂದು ಕಲಿಸುತ್ತದೆ. ಪರೀಕ್ಷೆಗಳು ಜೀವನದ ಮೂಲಭೂತ ಗುಣಗಳನ್ನು ಕಲಿಸುತ್ತವೆ. ನಿಮ್ಮ ಮನಸ್ಸನ್ನು ಡೈನಾಮಿಕ್ ಮೋಡ್‌ನಲ್ಲಿ ಇರಿಸಿ. ನಮ್ಮ ಸುತ್ತಲೂ ನಾವು ನೋಡುವ ಎಲ್ಲದರ ಹಿಂದಿನ ವಿಜ್ಞಾನವನ್ನು ನಾವು ಅರ್ಥಮಾಡಿಕೊಳ್ಳಬೇಕು.
  2. ನೀವು ಇಂದು ಶಾಲೆ, ಪರೀಕ್ಷೆ, ಶಿಕ್ಷಣ ಎಂದು ಏನನ್ನು ಕರೆಯುತ್ತೀರೋ ಅದು ನಿಮ್ಮ ಮೆದುಳಿನ ಬೆಳವಣಿಗೆಗೆ. ನೀವು ನಿಮ್ಮ ಬುದ್ಧಿಶಕ್ತಿಯನ್ನು ಹೆಚ್ಚು ಸಕ್ರಿಯವಾಗಿಟ್ಟುಕೊಂಡಷ್ಟೂ, ನಿಮ್ಮ ಮೆದುಳು ಅಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಬೋರ್ಡ್ ಪರೀಕ್ಷೆಗಳ ಸಮಯದಲ್ಲಿ ಒತ್ತಡವನ್ನು ಹೇಗೆ ಎದುರಿಸುವುದು?

  1. ಬೋರ್ಡ್ ಪರೀಕ್ಷೆಗಳಲ್ಲಿ ಬರುವ ಒತ್ತಡವನ್ನು ನಿಭಾಯಿಸುವ ಬಗ್ಗೆ ಮಾತನಾಡುತ್ತಾ, ಪಠ್ಯಪುಸ್ತಕಗಳು ಬುದ್ಧಿಶಕ್ತಿಗೆ ಸವಾಲಲ್ಲ, ಆದ್ದರಿಂದ ಅವುಗಳನ್ನು ಮೋಜಿನಿಂದ ಕೂಡಿಸಿ. ನೀವು ಯಾರು ಮತ್ತು ನೀವು ಪರೀಕ್ಷೆಯಲ್ಲಿ ಹೇಗೆ ಸಾಧನೆ ಮಾಡಿದ್ದೀರಿ ಎಂಬುದು ಮುಖ್ಯವಲ್ಲ. ನೀವು ಅನಗತ್ಯವಾಗಿ ಅದನ್ನು ಚಿಂತಿಸುವ ಮೂಲಕ ಅದನ್ನು ಕಷ್ಟಕರವಾಗಿಸಿಕೊಳ್ಳುತ್ತಿದ್ದೀರಿ. ಆದ್ದರಿಂದ, ವಿದ್ಯಾರ್ಥಿಗಳು ತಮ್ಮ ಪಠ್ಯಪುಸ್ತಕಗಳನ್ನು ಸರಳವಾಗಿವೆ ಸ್ವೀಕರಿಸಿ, ಅದು ನಿಮಗೆ ಸವಾಲಾಗಿ ಪರಿಣಮಿಸುವುದಿಲ್ಲ.