ಮೈಸೂರು ಗಲಭೆ ಪ್ರಕರಣ: ಆರೋಪಿ ಸತೀಶ್ ಗೆ ಇಂದು ಜಾಮೀನು ಸಿಗುವ ಸಾಧ್ಯತೆ ಎಂದ ವಕೀಲ
ಸತೀಶ್ ಅವರನ್ನು ಕೋರ್ಟ್ಗೆ ಹಾಜರುಪಡಿಸಿದ ಪೊಲೀಸರು ಕಕ್ಷಿದಾರನ ವಿರುದ್ಧ ಮಾಡಿರುವ ಆರೋಪಗಳಿಗೆ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ, ಸತೀಶ್ ಧರ್ಮವೊಂದರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದರೆ ಅದಕ್ಕೆ ಪುರಾವೆಯನ್ನು ನ್ಯಾಯಾಲಯಕ್ಕೆ ನೀಡಬೇಕಿತ್ತು, ಇದೇ ಆಧಾರದ ಮೇಲೆ ತಾನು ವಾದ ಮಾಡಿರುವುದಾಗಿ ಹೇಳಿದ ವಕೀಲ, ಇಂದು ಸತೀಶ್ ಗೆ ಜಾಮೀನು ಸಿಗಲಿದೆ ಎಂದರು.
ಮೈಸೂರು: ನಗರದಲ್ಲಿ ಮೊನ್ನೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸತೀಶ್ ಅಲಿಯಾಸ್ ಪಾಂಡುರಂಗ ಹೆಸರಿನ ವ್ಯಕ್ತಿಯನ್ನು ವಶಕ್ಕೆ ಪಡೆದು ನಿನ್ನೆ ಸಾಯಂಕಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಅವರ ಜಾಮೀನು ಕುರಿತ ವಿಚಾರಣೆ ನಡೆದಿದ್ದು ನ್ಯಾಯಲಯ ತೀರ್ಪನ್ನು ಶನಿವಾರಕ್ಕೆ ಕಾಯ್ದಿರಿಸಿದೆ. ಪ್ರಚೋದನಕಾರಿ ಪೋಸ್ಟೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಆರೋಪವನ್ನು ಸತೀಶ್ ಎದುರಿಸುತ್ತಿದ್ದಾರೆ. ಅವರ ಪರ ವಕೀಲರೊಬ್ಬರು ಮಾಧ್ಯಮಗಳೊಂದಿಗೆ ಮಾತಾಡಿದ್ದು ಇಂದು ಜಾಮೀನು ಸಿಗುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೈಸೂರು ಘಟನೆಯಲ್ಲಿ ಪೊಲೀಸರೇ ತಪ್ಪಿತಸ್ಥರಾಗಿ ಶಿಕ್ಷೆಗೊಳಗಾದರೆ ಆಶ್ಚರ್ಯವಿಲ್ಲ: ಆರ್ ಅಶೋಕ, ವಿಪಕ್ಷ ನಾಯಕ