ಯತ್ನಾಳ್ರನ್ನು ವರಿಷ್ಠರು ಉಚ್ಛಾಟಿಸುತ್ತಾರೋ ಅಥವಾ ರಾಜ್ಯದಲ್ಲಿ ಉನ್ನತ ಸ್ಥಾನಕ್ಕೇರಿಸುತ್ತಾರೋ? ಕುಮಾರ ಬಂಗಾರಪ್ಪ
ರೇಣುಕಾಚಾರ್ಯ ತಂಡ ಬಸನಗೌಡ ಯತ್ನಾಳ್ ರನ್ನು ಪಕ್ಷದಿಂದ ಉಚ್ಛಾಟಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮೇಲೆ ಹೇರುತ್ತಿರುವ ಒತ್ತಡಕ್ಕೆ ಪ್ರತಿಕ್ರಿಯಿಸಿದ ಕುಮಾರ ಬಂಗಾರಪ್ಪ, ಯತ್ನಳ್ರನ್ನು ಯಾರು ಉಚ್ಛಾಟನೆ ಮಾಡಬೇಕು? ನೋಟೀಸ್ ಜಾರಿ ಮಾಡಲಾಗಿದೆ ಅದಕ್ಕವರು ಉತ್ತರಿಸುತ್ತಾರೆ, ನಂತರ ವರಿಷ್ಠರು ಉಚ್ಛಾಟಿಸುತ್ತಾರೋ ಅಥವಾ ಪಕ್ಷ ಸಂಘಟನೆಯಲ್ಲಿ ಎತ್ತರ ಸ್ಥಾನಕ್ಕೇರಿಸುತ್ತಾರೋ ಕಾದು ನೀಡಬೇಕು ಎಂದರು.
ಬೆಳಗಾವಿ: ನಗರದಲ್ಲಿಂದು ನಮ್ಮ ವರದಿಗಾರನೊಂದಿಗೆ ಮಾತಾಡಿದ ಕುಮಾರ ಬಂಗಾರಪ್ಪ, ವಕ್ಫ್ ವಿರುದ್ಧ ರೈತರ ಪರವಾಗಿ ಹೋರಾಟ ನಡೆಸುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ತಂಡಕ್ಕೆ ಇವತ್ತು ಜನ ಬೆಂಬಲ ಜಾಸ್ತಿಯಿದೆ ಎಂದು ಹೇಳಿದರು. ರಾಜ್ಯದ ಇತರ ಪ್ರಮುಖ ನಾಯಕರು ಯತ್ನಾಳ್ ಅವರಂತೆ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಇಲ್ಲವೇ ರದ್ದುಮಾಡಲು ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಯತ್ನಕ್ಕೆ ನೆರವಾಗಬೇಕಿತ್ತು, ಆದರೆ ಅದನ್ನವರು ಮಾಡಲಿಲ್ಲ ಎಂದು ಬಂಗಾರಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯತ್ನಾಳ್ಗೆ ನೋಟೀಸ್ ನೀಡಲಾಗಿದೆ, ವಕ್ಫ್ ವಿರುದ್ಧ ಹೋರಾಡುತ್ತಿರುವವರಿಗಲ್ಲ: ಕುಮಾರ ಬಂಗಾರಪ್ಪ