Loading video

ಶಾಸಕರು ಮತ್ತು ಕಾರ್ಯಕರ್ತರ ಆಶಯದ ಮೇರೆಗೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕು: ವೀರಪ್ಪ ಮೊಯ್ಲಿ

|

Updated on: Mar 04, 2025 | 1:37 PM

ಎಐಸಿಸಿ ಸಮಕ್ಷಮ ಅಧಿಕಾರ ಹಂಚಿಕೆಯ ಬಗ್ಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಏನು ಒಡಂಬಡಿಕೆ ಆಗಿದೆ ಅಂತ ತನಗಂತೂ ಗೊತ್ತಿಲ್ಲ, ಅದನ್ನು ಆವರಿಗಷ್ಟೇ ಕೇಳಬೇಕು, ಅದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿರುವ ತನಗೆ ಶಿವಕುಮಾರ್ ಮುಖ್ಯಮಂತ್ರಿಯಾಗಲು ಎಲ್ಲ ರೀತಿಯಿಂದಲೂ ಅರ್ಹರು ಅನಿಸುತ್ತಿದೆ, ಪಕ್ಷಕ್ಕಾಗಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ, ಎಂದು ಮೊಯ್ಲಿ ಹೇಳಿದರು.

ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿಯಾಗಬೇಕೆಂದು ಹೇಳಿ ವಿವಾದ ಸೃಷ್ಟಿಸಿರುವ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಇಂದು ನಮ್ಮ ಪ್ರತಿನಿಧಿಯೊಂದಿಗೆ ಹೆಚ್ಚು ಸಮತೋಲನದಿಂದ ಮಾತಾಡಿದರು. ಸಿದ್ದರಾಮಯ್ಯ ಆಗಬೇಕು, ಶಿವಕುಮಾರ್ ಆಗಬೇಕು ಅಂತ ಹೇಳುವುದು ತಪ್ಪು ಎಂದ ಅವರು ಹೈಕಮಾಂಡ್ ಪದದ ಬಳಕೆಯೇ ಸರಿಯಲ್ಲ, ಕೇಂದ್ರದ ವರಿಷ್ಠರು ಇಲ್ಲಿನ ಕಾರ್ಯಕರ್ತರ ಮತ್ತು ಶಾಸಕರ ಆಶಯಗಳ ಮೇರೆಗೆ ಮುಖ್ಯಮಂತ್ರಿಯನ್ನು ನೇಮಕ ಮಾಡಬೇಕು, ನೇರವಾಗಿ ಮಾಡುವಂತೆ ಇಲ್ಲ, ತನ್ನ ವಿಷಯದಲ್ಲಿ ಎರಡೂ ಅಗಿದೆ, ಮೊದಲ ಬಾರಿಗೆ ಕೇಂದ್ರದವರು ಬೇರೆಯವರನ್ನು ಮನಸ್ಸಿನಲ್ಲಿಟ್ಟುಕೊಂಡು ಬಂದಿದ್ದರು, ಆದರೆ ಶೇಕಡ 90 ರಷ್ಟು ಶಾಸಕರು ತನ್ನ ಪರವಾಗಿದ್ದ ಕಾರಣ ಮುಖ್ಯಮಂತ್ರಿಯಾಗಿ ತನ್ನನ್ನು ನೇಮಕ ಮಾಡಲಾಯಿತು, 80ರ ದಶಕದಲ್ಲಿ ಇದಕ್ಕೆ ತದ್ವಿರುದ್ಧವಾದ ಸಂಗತಿ ನಡೆದ ಕಾರಣ ತಾನು ಸಿಎಂ ಆಗಲಿಲ್ಲ ಎಂದು ಮೊಯ್ಲಿ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಡಿ.ಕೆ ಶಿವಕುಮಾರ್ ಸಿಎಂ ಆಗುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲ; ವೀರಪ್ಪ ಮೊಯ್ಲಿ ಸ್ಫೋಟಕ ಹೇಳಿಕೆ