ವೈದ್ಯರ ಪ್ರತಿಭಟನೆ, ಒಪಿಡಿಗಳು ಬಂದ್; ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳ ಪರದಾಟ!
ಇಲ್ಲಿ ಸರ್ಕಾರದ ವೈಫಲ್ಯ ಸ್ಪಷ್ಟವಾಗಿ ಗೋಚರಿಸುತ್ತದೆ. ವೈದ್ಯರು ಪ್ರತಿಭಟನೆ ನಡೆಸಲಿರುವುದರಿಂದ ಒಪಿಡಿಗಳು ಮುಚ್ಚಬೇಕಾಗುತ್ತದೆ ಅನ್ನೋದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗೆ ಗೊತ್ತಿತ್ತು. ಹಾಗಾಗಿ ನಗರ, ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಬದಲೀ ವ್ಯವಸ್ಥೆಯನ್ನು ಕಲ್ಪಿಸುವ ಕೆಲಸವನ್ನು ಸಚಿವ ಮಾಡಬೇಕಿತ್ತು. ಚಿಕಿತ್ಸೆ ಅಗತ್ಯವಿರುವ ಜನರಿಗೆ ಹೆಚ್ಚು ಕಡಿಮೆಯಾದರೆ ಸರ್ಕಾರ ಹೊಣೆ ಹೊತ್ತೀತೆ?
ಬೆಂಗಳೂರು: ಕೊಲ್ಕತ್ತಾದ ಸರ್ಕಾರೀ ಆಸ್ಪತ್ರೆಯೊಂದರಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಮತ್ತು ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ ಮತ್ತು ರಾಜ್ಯದಲ್ಲೂ ಇವತ್ತು ವೈದ್ಯರು, ಹೌಸ್ ಸರ್ಜನ್ಶಿಪ್ ಮಾಡುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿರುವುದರಿಂದ ಒಪಿಡಿಗಳು ಬಂದ್ ಆಗಿವೆ. ಇದರಿಂದಾಗಿ ತುರ್ತು ವೈದ್ಯಕೀಯ ನೆರವಿನ ಅಗತ್ಯವಿರುವ ರೋಗಿಗಳಿಗೆ ಭಾರೀ ಸಮಸ್ಯೆ ಎದುರಾಗಿದೆ. ನಮ್ಮ ವರದಿಗಾರ ನಗರದ ಕೆಸಿ ಜನರಲ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದು ವೈದ್ಯರು ಇಲ್ಲದ ಕಾರಣ ಆಸ್ಪತ್ರೆಯ ಆವರರಣದಲ್ಲಿ ಕುಳಿತು ತೊಂದರೆ ಅನುಭವಿಸುತ್ತಿರುವ ಎಂಟು ತಿಂಗಳು ಗರ್ಭಿಣಿ ಮತ್ತು ಆಕೆಯೊಂದಿಗೆ ಬಂದದರುವ ಮಹಿಳೆಯೊಂದಿಗೆ ಮಾತಾಡಿದ್ದಾರೆ. ಗರ್ಭಿಣಿಗೆ ಬೆಳಗಿನ ಜಾವ ಮೂರು ಗಂಟೆಗೆ ರಕ್ತಸ್ರಾವ ಶರುವಾಗಿದೆ ಮತ್ತು ಅವರು ವಾಸವಾಗಿರುವ ಲಗ್ಗೆರೆಯಲ್ಲಿನ ಸರ್ಕಾರಿ ಅಸ್ಪತ್ರೆಗೆ ಹೋದಾಗ ನರ್ಸ್ ಗಳು ಕೆಸಿ ಜನರಲ್ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ. ಇವತ್ತು ಸಾಯಂಕಾಲದವರೆಗೆ ಮಹಿಳೆಗೆ ವೈದ್ಯಕೀಯ ಉಪಚಾರ ಸಿಗಲಾರದು. ರಕ್ತಸ್ರಾವ ಹೆಚ್ಚಿದರೆ ಏನು ಗತಿ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವೈದ್ಯರ ಪ್ರತಿಭಟನೆ: ಇಂದು ಯಾವೆಲ್ಲ ಸೇವೆಗಳು ಲಭ್ಯ, ಏನೆಲ್ಲ ಇರಲ್ಲ? ಇಲ್ಲಿದೆ ಮಾಹಿತಿ