‘ಪವಿತ್ರಾ ಅಂತ್ಯಕ್ರಿಯೆ ಬಳಿಕ ಅಲ್ಲಿಂದ ಬರೋಕೆ ರೆಡಿ ಇರಲಿಲ್ಲ’; ನಟ ಚಂದು ಆತ್ಮಹತ್ಯೆಗೆ ಅಸಲಿ ಕಾರಣ ಏನು?

Updated on: May 18, 2024 | 12:56 PM

ಕಿರುತೆರೆ ನಟಿ ಪವಿತ್ರಾ ಅವರನ್ನು ಮಂಡ್ಯದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಅಲ್ಲಿಗೆ ಚಂದು ಕೂಡ ಆಗಮಿಸಿದ್ದರು. ಆಗ ಅವರು ಸಾಕಷ್ಟು ಕಣ್ಣೀರು ಹಾಕಿದ್ದರು. ಪವಿತ್ರಾನ ಕಳೆದುಕೊಂಡು ಬೇಸರ ಹೊರಹಾಕಿದ್ದರು.

ನಟಿ ಪವಿತ್ರಾ ಜಯರಾಂ (Pavitra Jayaram) ಅವರು ನಿಧನ ಹೊಂದಿದ ಬೆನ್ನಲ್ಲೇ ಅವರ ಗೆಳೆಯ ಚಂದು ಅವರು ಆತ್ಮಹತ್ಯೆ ಮಾಡಿಕೊಂಡು ನಿಧನ ಹೊಂದಿದ್ದಾರೆ. ಪವಿತ್ರಾ ಅವರನ್ನು ಮಂಡ್ಯದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಅಲ್ಲಿಗೆ ಚಂದು ಕೂಡ ಆಗಮಿಸಿದ್ದರು. ಆಗ ಅವರು ಸಾಕಷ್ಟು ಕಣ್ಣೀರು ಹಾಕಿದ್ದರು. ಪವಿತ್ರಾನ ಕಳೆದುಕೊಂಡು ಬೇಸರ ಹೊರಹಾಕಿದ್ದರು. ಈಗ ಅವರು ಕೂಡ ಆತ್ಮಹತ್ಯೆ ಮಾಡಿಕೊಂಡಿರೋದು ಅನೇಕರಿಗೆ ಶಾಕಿಂಗ್ ಎನಿಸಿದೆ. ಈ ಬಗ್ಗೆ ಪವಿತ್ರ ಜಯರಾಂ ಸಂಬಂಧಿ ಲೋಕೇಶ್ ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ. ‘ಅಂತ್ಯಕ್ರಿಯೆ ನಡೆಯುವಾಗ ಚಂದು ಮಾತನಾಡಿದ್ದರು. ಪವಿತ್ರಾನ ಬಿಟ್ಟಿರೋಕೆ ಆಗಲ್ಲ ಎಂದು ಹೇಳುತ್ತಲೇ ಇದ್ದರು. ಅವರ ಆಲೋಚನೆಯಲ್ಲೇ ಇದ್ದರು. ನನ್ನ ಪರಿಸ್ಥಿತಿ ಈ ರೀತಿ ಆಗೋಯ್ತಲ್ಲ ಎನ್ನುತ್ತಿದ್ದರು. ಮೊಬೈಲ್ ಸಂಖ್ಯೆ ಕೂಡ ಕೊಟ್ಟಿದ್ದರು. ಆದರೆ, ಕರೆ ಮಾಡೋಕೆ ಆಗಿರಲಿಲ್ಲ’ ಎಂದಿದ್ದಾರೆ ಲೋಕೇಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: May 18, 2024 12:15 PM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More