Pavitra Lokesh: ‘ಗಂಡ ಸರಿಯಿಲ್ಲ ಅಂತಾರೆ, ಆದ್ರೂ ಜತೆಯೇ ಇರ್ಬೇಕು ಅಂತಾರೆ’: ರಮ್ಯಾ ರಘುಪತಿ ಬಗ್ಗೆ ಪವಿತ್ರಾ ನೇರ ಮಾತು

| Updated By: ಮದನ್​ ಕುಮಾರ್​

Updated on: Jul 01, 2022 | 2:48 PM

Pavitra Lokesh | Naresh: ‘ತಾನು ಪ್ರಚಾರ ಪಡೆಯಬೇಕು ಎಂಬ ಕಾರಣಕ್ಕೆ ರಮ್ಯಾ ರಘುಪತಿ ಅವರು ಬೆಂಗಳೂರಿನಲ್ಲಿ ಮಾತಾಡ್ತಾ ಇದ್ದಾರೆ. ನನ್ನನ್ನು ಟಾರ್ಗೆಟ್​ ಮಾಡ್ತಿದ್ದಾರೆ’ ಎಂದು ಪವಿತ್ರಾ ಲೋಕೇಶ್​ ಆರೋಪಿಸಿದ್ದಾರೆ.

​ತೆಲುಗು ನಟ ನರೇಶ್​ (Naresh) ಹಾಗೂ ಅವರ ಪತ್ನಿ ರಮ್ಯಾ ರಘುಪತಿ (Ramya Raghupathi) ಸಂಸಾರದ ಜಗಳ ಬೀದಿಗೆ ಬಂದಿದೆ. ಇಬ್ಬರ ನಡುವೆ ನಟಿ ಪವಿತ್ರಾ ಲೋಕೇಶ್​ ಹೆಸರು ಕೂಡ ಕೇಳಿಬಂದಿದೆ. ಸೋಶಿಯಲ್​ ಮೀಡಿಯಾದಲ್ಲಿ ಪವಿತ್ರಾ ಲೋಕೇಶ್​ ಬಗ್ಗೆ ಅನೇಕ ಗಾಸಿಪ್​ಗಳು ಹರಿದಾಡಿವೆ. ಆ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ರಮ್ಯಾ ರಘುಪತಿ ಬಗ್ಗೆ ಪವಿತ್ರಾ ಲೋಕೇಶ್​ (Pavitra Lokesh) ಕೆಲವು ಖಡಕ್​ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ‘ತನ್ನ ಗಂಡ ಸರಿಯಿಲ್ಲ ಅಂತಾರೆ. ಆದರೂ ಅವರ ಜೊತೆಯೇ ಇರಬೇಕು ಅಂತಾರೆ. ಹಾಗಿದ್ದರೆ ಜೊತೆಗೆ ಇರಬಹುದಲ್ಲ. ನನ್ನನ್ನು ಯಾಕೆ ಇದರಲ್ಲಿ ತಳ್ಳುತ್ತಿದ್ದಾರೆ? ಈಗ ಅವರಿಬ್ಬರೂ ಯಾಕೆ ಬೇರೆ ಆಗಿದ್ದಾರೆ ಎಂಬುದಕ್ಕೆ ಅವರೇ ಉತ್ತರ ನೀಡಬೇಕು. ನನ್ನನ್ನು ಯಾಕೆ ಟಾರ್ಗೆಟ್​ ಮಾಡ್ತಿದ್ದಾರೆ ಅನ್ನೋದು ಕೂಡ ಅವರು ಹೇಳಬೇಕು’ ಎಂದಿದ್ದಾರೆ ಪವಿತ್ರಾ ಲೋಕೇಶ್​.

ಇದನ್ನೂ ಓದಿ: Pavitra Lokesh: ‘ಸುಚೇಂದ್ರ ಪ್ರಸಾದ್​ ಜತೆ ನನ್ನ ಮದುವೆ ಆಗಿಲ್ಲ, 11 ವರ್ಷ ಒಟ್ಟಿಗೆ ಇದ್ದೆ ಅಷ್ಟೇ’: ನಟಿ ಪವಿತ್ರಾ ಲೋಕೇಶ್​

Pavitra Lokesh: ಸೈಬರ್​ ಠಾಣೆ ಮೆಟ್ಟಿಲೇರಿದ ನಟಿ ಪವಿತ್ರಾ ಲೋಕೇಶ್​; ಗಾಸಿಪ್​ ಹಬ್ಬಿಸಿದವರ ವಿರುದ್ಧ ಕಾನೂನು ಸಮರ