‘ಕನ್ನಡ ಕಲಿಯುವ ಮನಸ್ಸಾಗಿದೆ’: ಕರುನಾಡಿಗೆ ಬಂದು ಆಸೆ ಹೇಳಿಕೊಂಡ ಪವನ್​ ಕಲ್ಯಾಣ್​

Updated on: Aug 08, 2024 | 10:59 PM

ಕರ್ನಾಟಕದ ಅರಣ್ಯ ಇಲಾಖೆಯೊಂದಿಗೆ ಸಭೆ ನಡೆಸಲು ಪವನ್​ ಕಲ್ಯಾಣ್​ ಅವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅವರು ಕನ್ನಡದ ಬಗ್ಗೆ ತಮಗೆ ಇರುವ ಅಭಿಮಾನವನ್ನು ವ್ಯಕ್ತಪಡಿಸಿದರು. ಕುವೆಂಪು, ರಾಜ್​ಕುಮಾರ್​ ಮುಂತಾದ ದಿಗ್ಗಜರ ಬಗ್ಗೆ ಕೂಡ ಪವನ್​ ಕಲ್ಯಾಣ್​ ಮಾತನಾಡಿದರು. ತಾವು ಸಹ ಕನ್ನಡ ಕಲಿಯುವುದಾಗಿ ಹೇಳಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ..

ನಟ ಪವನ್​ ಕಲ್ಯಾಣ್​ ಅವರು ಈಗ ರಾಜಕೀಯದಲ್ಲಿ ಸಂಪೂರ್ಣ ತೊಡಗಿಕೊಂಡಿದ್ದಾರೆ. ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿಯಾಗಿ ಅವರು ಕಾರ್ಯನಿರತರಾಗಿದ್ದಾರೆ. ವಿವಿಧ ಪ್ರದೇಶಗಳಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ. ಇಂದು (ಆಗಸ್ಟ್​ 8) ಪವನ್​ ಕಲ್ಯಾಣ್​ ಅವರು ಬೆಂಗಳೂರಿಗೆ ಆಗಮಿಸಿದ್ದರು. ಕರ್ನಾಟಕ ಅರಣ್ಯ ಇಲಾಖೆ ಜೊತೆ ನಡೆಸಿದೆ ಸಭೆಯಲ್ಲಿ ಪವನ್​ ಕಲ್ಯಾಣ್​ ಭಾಗಿಯಾದರು. ಈ ಸಂದರ್ಭದಲ್ಲಿ ಅವರು ಕನ್ನಡ ಭಾಷೆಯ ಬಗ್ಗೆ ಮಾತನಾಡಿದರು. ಕನ್ನಡವನ್ನು ತಾವೂ ಕೂಡ ಕಲಿತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅವರು ಹೇಳಿದರು. ‘ಈ ಸಭೆಯಿಂದ ನನಗೂ ಕನ್ನಡ ಕಲಿಯುವ ಮನಸ್ಸಾಗಿದೆ’ ಎಂದಿದ್ದಾರೆ ಪವನ್​ ಕಲ್ಯಾಣ್​. ಅವರ ಈ ಮಾತುಗಳನ್ನು ಕೇಳಿ ಕರುನಾಡಿನಲ್ಲಿನ ಅಭಿಮಾನಿಗಳಿಗೆ ಸಖತ್​ ಖುಷಿಯಾಗಿದೆ. ಜನರಿಗೆ ಪವನ್​ ಕಲ್ಯಾಣ್​ ಮೇಲಿನ ಅಭಿಮಾನ ಇನ್ನಷ್ಟು ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More