Anna Lezhneva: ಅಗ್ನಿ ಅವಘಡದಿಂದ ಮಗ ಪಾರಾಗಿದ್ದಕ್ಕೆ ತಿರುಪತಿಯಲ್ಲಿ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ

Updated on: Apr 13, 2025 | 10:10 PM

Pawan Kalyan Wife: ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ಅವರು ತಿರುಪತಿಯಲ್ಲಿ ಮುಡಿಕೊಟ್ಟಿದ್ದಾರೆ. ಇತ್ತೀಚೆಗೆ ಅವರ ಪುತ್ರ ಮಾರ್ಕ್ ಶಂಕರ್ ಸಿಂಗಾಪುರದಲ್ಲಿ ಅಗ್ನಿ ಅವಘಡದಿಂದ ಪಾರಾಗಿದ್ದ. ಈಗ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ಅವರು ತಿರುಪತಿಯಲ್ಲಿ ಮುಡಿಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ಟಾಲಿವುಡ್ ನಟ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ (Anna Lezhneva) ಅವರು ತಿರುಪತಿಯಲ್ಲಿ ಮುಡಿಕೊಟ್ಟಿದ್ದಾರೆ. ಕೆಲವೇ ದಿನಗಳ ಹಿಂದೆ ಅವರ ಪುತ್ರ ಮಾರ್ಕ್ ಶಂಕರ್ (Mark Shankar) ಸಿಂಗಾಪುರದಲ್ಲಿ ಅಗ್ನಿ ಅವಘಡದಿಂದ ಪಾರಾಗಿದ್ದ. ಎಂಟು ವರ್ಷ ವಯಸ್ಸಿನ ಮಾರ್ಕ್ ಶಂಕರ್​ಗೆ ಸುಟ್ಟ ಗಾಯಗಳಾಗಿದ್ದವು. ಆತ ಈಗ ಚೇತರಿಸಿಕೊಳ್ಳುತ್ತಿದ್ದಾನೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಆತನನ್ನು ಭಾರತಕ್ಕೆ ವಾಪಸ್ ಕರೆದುಕೊಂಡು ಬರಲಾಗಿದೆ. ಈ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ಪತ್ನಿ (Pawan Kalyan Wife) ಅನ್ನಾ ಲೆಜ್ನೆವಾ ಅವರು ತಿರುಪತಿಯಲ್ಲಿ ಮುಡಿಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

​ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.