ಪವನ್ ಕಲ್ಯಾಣ್ ಪುತ್ರನ ಅಗ್ನಿ ಅವಘಡದ ವೇಳೆ ಪ್ರಧಾನಿ ನರೇಂದ್ರ ಮೋದಿ ಸಹಾಯ
ನಟ ಪವನ್ ಕಲ್ಯಾಣ್ ಅವರ ಪುತ್ರ ಮಾರ್ಕ್ ಶಂಕರ್ ಇತ್ತೀಚೆಗೆ ಅಗ್ನಿ ಅವಘಡದಲ್ಲಿ ಸಿಲುಕಿದಾಗ ಎಲ್ಲರಿಗೂ ಆತಂಕ ಆಗಿತ್ತು. ಆ ಕಷ್ಟದ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಸಹಾಯ ಮಾಡಿದ್ದರು. ಅದಕ್ಕಾಗಿ ಈಗ ಪವನ್ ಕಲ್ಯಾಣ್ ಅವರು ಈಗ ಧನ್ಯವಾದ ಅರ್ಪಿಸಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ..

ಟಾಲಿವುಡ್ ನಟ, ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕುಟಂಬಕ್ಕೆ ಇತ್ತೀಚೆಗೆ ಒಂದು ಸಮಸ್ಯೆ ಎದುರಾಗಿತ್ತು. ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ. ಸಿಂಗಾಪುರದಲ್ಲಿ ಸಂಭವಿಸಿದ ಈ ಘಟನೆಯಿಂದ 8 ವರ್ಷದ ಮಾರ್ಕ್ ಶಂಕರ್ಗೆ ಸುಟ್ಟ ಗಾಯಗಳಾದವು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅಗ್ನಿ ಅವಘಡ ಸಂಭವಿಸಿದಾಗ ಪವನ್ ಕಲ್ಯಾಣ್ ಕುಟುಂಬಕ್ಕೆ ನರೇಂದ್ರ ಮೋದಿ ಸಹಾಯ ಮಾಡಿದ್ದರು. ಅದಕ್ಕಾಗಿ ಈಗ ಪವನ್ ಕಲ್ಯಾಣ್ ಅವರು ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ಧನ್ಯವಾದ ತಿಳಿಸಿದ್ದಾರೆ.
‘ನನ್ನ ಮಗ ಮಾರ್ಕ್ ಶಂಕರ್ ಸಿಂಗಾಪುರದ ಬೇಸಿಗೆ ಶಿಬಿರದಲ್ಲಿ ಇದ್ದಾಗ ಅಗ್ನಿ ಅವಘಡ ಸಂಭವಿಸಿತು. ಆ ವೇಳೆ ಸಹಾಯ ಮಾಡಿದ್ದಕ್ಕಾಗಿ ಮಾನ್ಯ ಪ್ರಧಾನ ಮಂತ್ರಿ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಈ ಕಷ್ಟದ ಸಂದರ್ಭದಲ್ಲಿ ಸಿಂಗಾಪುರದಲ್ಲಿ ಇರುವ ಭಾರತೀಯ ರಾಯಭಾರಿ ಕಚೇರಿ ಕೂಡ ಸ್ಪಂದಿಸಿತು’ ಎಂದು ಪವನ್ ಕಲ್ಯಾಣ್ ಅವರು ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
I extend my deepest gratitude to you, Hon’ble Prime Minister Shri @narendramodi ji, and @PMOIndia for the prompt and supportive response during the tragic fire incident at my son Mark Shankar’s summer camp in Singapore. The assistance provided through the Singapore authorities,…
— Pawan Kalyan (@PawanKalyan) April 13, 2025
ಚೇತರಿಸಿಕೊಳ್ಳುತ್ತಿರುವ ಮಾರ್ಕ್ ಶಂಕರ್ನನ್ನು ಸಿಂಗಾಪುರದಿಂದ ಹೈದರಾಬಾದ್ಗೆ ಕರೆದುಕೊಂಡು ಬರಲಾಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿವೆ. ಮಗನನ್ನು ಪವನ್ ಕಲ್ಯಾಣ್ ಅವರು ಎತ್ತಿಕೊಂಡು ಬಂದಿದ್ದಾರೆ. ಮಾರ್ಕ್ ಶಂಕರ್ ಇನ್ನೂ ಚೇತರಿಸಿಕೊಳ್ಳುವುದು ಬಾಕಿ ಇದೆ. ಆತ ಬೇಗ ಗುಣಮುಖನಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ: ಮತ್ತೊಂದು ಮದುವೆ ಬಗ್ಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ಮಾತು
ಇತ್ತೀಚೆಗೆ ಪವನ್ ಕಲ್ಯಾಣ್ ಅವರ ಸಹೋದರ ಮೆಗಾ ಸ್ಟಾರ್ ಚಿರಂಜೀವಿ ಕೂಡ ಅಪ್ಡೇಟ್ ನೀಡಿದ್ದರು. ಆದಷ್ಟು ಬೇಗ ಮಾರ್ಕ್ ಶಂಕರ್ ಗುಣಮುಖನಾಗುತ್ತಾನೆ ಎಂಬ ಭರವಸೆಯನ್ನು ಅವರು ನೀಡಿದ್ದರು. ‘ಅಗ್ನಿ ಅವಘಡ ನಡೆದ ಬಳಿಕ ಬೇರೆ ಬೇರೆ ಹಳ್ಳಿ ಹಾಗೂ ಪ್ರದೇಶದ ಜನರು ಒಟ್ಟಾಗಿ ನಮ್ಮ ಫ್ಯಾಮಿಲಿಗಾಗಿ ಪ್ರಾರ್ಥನೆ ಮಾಡಿದರು. ಮಾರ್ಕ್ ಶಂಕರ್ ಚೇತರಿಸಿಕೊಳ್ಳಲಿ ಅಂತ ಆಶೀರ್ವಾದ ಮಾಡಿದರು. ನನ್ನ ಸಹೋದರ ಪವನ್ ಕಲ್ಯಾಣ್ ಪರವಾಗಿ ಮತ್ತು ನಮ್ಮ ಕುಟುಂಬದ ಪರವಾಗಿ ನಾನು ಹೃತ್ಪೂರ್ವಕವಾಗಿ ನಿಮ್ಮಲ್ಲರ ಬೆಂಬಲಕ್ಕೆ ಧನ್ಯವಾದ ತಿಳಿಸುತ್ತೇನೆ’ ಎಂದು ಚಿರಂಜೀವಿ ಬರೆದುಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:47 pm, Sun, 13 April 25