ಪ್ರಜ್ವಲ್ ರೇವಣ್ಣರನ್ನ SIT ಕಚೇರಿಗೆ ಕರೆತಂದ ಜೀಪ್ನಲ್ಲಿದ್ದವರೆಲ್ಲ ಮಹಿಳಾ ಸಿಬ್ಬಂದಿ
ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಗುರವಾರ ಮಧ್ಯರಾತ್ರಿ ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಎಸ್ಐಟಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಂಡರು.
ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರು ಭಾರತಕ್ಕೆ ಬಂದಿದ್ದಾರೆ. ಕಳೆದ 34 ದಿನಗಳಿಂದ ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಅವರು ಗುರವಾರ ಮಧ್ಯರಾತ್ರಿ ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಪ್ರಜ್ವಲ್ ರೇವಣ್ಣ ಅವರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಎಸ್ಐಟಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಂಡರು. ವಿಮಾನ ನಿಲ್ದಾಣದ ಹಿಂದಿನ ಗೇಟ್ ಮೂಲಕ ಪ್ರಜ್ವಲ್ ರೇವಣ್ಣ ಅವರನ್ನು ಹೊರಗೆ ಕರೆತರಲಾಯಿತು.
ಪ್ರಜ್ವಲ್ ರೇವಣ್ಣರನ್ನ SIT ಕಚೇರಿಗೆ ಜೀಪ್ನಲ್ಲಿ ಕರೆತಂದಿದ್ದು ಮಹಿಳಾ ಅಧಿಕಾರಿಗಳು. ಹೌದು, ಪ್ರಜ್ವಲ್ ರೇವಣ್ಣ ಅವರು ಇದ್ದ ಜೀಪ್ನಲ್ಲಿ ಚಾಲಕ ಹೊರತು ಪಡಿಸಿದರೆ ಉಳಿದ ಐವರು ಮಹಿಳಾ ಅಧಿಕಾರಿಗಳೆ ಇದ್ದರು. ಜೀಪ್ನಲ್ಲಿ ಮಹಿಳಾ ಸಿಬ್ಬಂದಿ ಇದ್ದದ್ದು ಯಾಕೆ? ಎಂಬ ಪ್ರಶ್ನೆ ಮೂಡಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಹೀಗಾಗಿ ದೌರ್ಜನ್ಯಕ್ಕೆ ಒಳಗಾದವರು ಹೆದರದೆ ಬಂದು ದೂರು ಕೊಡಿ ಎಂದು ಸಂದೇಶ ರವಾನಿಸಲು ಮಹಿಳಾ ಸಿಬ್ಬಂದಿ ಎಸ್ಐಟಿ ಕಚೇರಿಗೆ ಕರೆತಂದ್ರಾ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಹೇಗಿರಲಿದೆ ತನಿಖೆ? ಎಸ್ಐಟಿ ತನಿಖಾ ಹಂತಗಳ ಬಗ್ಗೆ ಇಲ್ಲಿದೆ ಮಾಹಿತಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ