ಬೆಂಗಳೂರು: ಬೇಕಾಬಿಟ್ಟಿ ಕೆಲಸ ಮಾಡಿ ರಸ್ತೆಗುಂಡಿ ಮುಚ್ಚಿದ ಬಿಬಿಎಂಪಿ; ನಗರದ ಬಹುತೇಕ ವಾರ್ಡ್ಗಳಲ್ಲಿ ಕಳಪೆ ಕಾಮಗಾರಿ
ಗುಂಡಿ ಮುಚ್ಚಿದ ಲೆಕ್ಕ ನೀಡಬೇಕೆಂದು ಆತುರ ಆತುರವಾಗಿ ಕೆಲಸ ಮುಗಿಸಿದ ಬಿಬಿಎಂಪಿ ಸಿಬ್ಬಂದಿಗಳು, ಕಳಪೆ ಕಾಮಗಾರಿಗೆ ಕೋಟ್ಯಾಂತರ ರೂಪಾಯಿ ಹಣ ವೆಚ್ಚ ಮಾಡಿದ್ದಾರೆ. ಬಿಬಿಎಂಪಿ ಬೇಜವ್ದಾರಿ ಕೆಲಸಕ್ಕೆ ಸಾರ್ವಜನಿಕರು, ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ತೇಪೆ ಹಚ್ಚಿದ ರಸ್ತೆಗಳು ಮಳೆಗೆ ಮತ್ತೆ ಗುಂಡಿ ಬಿದ್ದಿವೆ. ಬಿಬಿಎಂಪಿ (BBMP) ಬೇಕಾಬಿಟ್ಟಿ ಕೆಲಸ ಮಾಡಿ ರಸ್ತೆಗುಂಡಿ ಮುಚ್ಚಿದ್ದು, ಬೆಂಗಳೂರು ನಗರದ ಬಹುತೇಕ ವಾರ್ಡ್ಗಳಲ್ಲಿ ಕಳಪೆ ಕಾಮಗಾರಿ ನಡೆದಿದೆ. ಟಿವಿ9 ರಿಯಾಲಿಟಿ ಚೆಕ್ನಲ್ಲಿ ಕಳಪೆ ಕಾಮಗಾರಿ ಬಯಲಾಗಿದೆ. ಕಳೆದ ಒಂದು ವಾರದ ಹಿಂದಷ್ಟೇ ರಸ್ತೆಗುಂಡಿಗಳನ್ನು ಬಿಬಿಎಂಪಿ ಅಧಿಕಾರಿಗಳು ಮುಚ್ಚಿದ್ದರು. ಆದರೆ ಲಾಲ್ ಬಾಗ್ ರಸ್ತೆಯ ಎಂಟಿಆರ್ ಹೋಟೆಲ್ ಜಕ್ಷನ್, ಬನಶಂಕರಿ ಸುತ್ತಮುತ್ತ ಗುಂಡಿಗಳು ಮತ್ತೆ ಕಾಣಿಸಿಕೊಂಡಿದೆ.
ಗುಂಡಿ ಮುಚ್ಚಿದ ಲೆಕ್ಕ ನೀಡಬೇಕೆಂದು ಆತುರ ಆತುರವಾಗಿ ಕೆಲಸ ಮುಗಿಸಿದ ಬಿಬಿಎಂಪಿ ಸಿಬ್ಬಂದಿಗಳು, ಕಳಪೆ ಕಾಮಗಾರಿಗೆ ಕೋಟ್ಯಾಂತರ ರೂಪಾಯಿ ಹಣ ವೆಚ್ಚ ಮಾಡಿದ್ದಾರೆ. ಬಿಬಿಎಂಪಿ ಬೇಜವ್ದಾರಿ ಕೆಲಸಕ್ಕೆ ಸಾರ್ವಜನಿಕರು, ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾಂಭರೀಕರಣಕ್ಕೆ ಹಾಕಿದ್ದ ಜಲ್ಲಿಕಲ್ಲು ಕಿತ್ತು ಹೊರ ಬಂದಿದೆ ಎಂದು ಸರ್ಕಾರದ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.
ಸಾರ್ವಜನಿಕರ ಟ್ಯಾಕ್ಸ್ ದುಡ್ಡಿನಲ್ಲಿ ಡಾಂಭರೀಕರಣ ಮಾಡುತ್ತಾರೆ. ರಸ್ತೆ ನೋಡಿದರೆ ಹೀಗೆ ಮಾಡಿದ್ದಾರೆ. ಜಿಟಿಜಿಟಿ ಮಳೆಗೆ ತೇಪೆ ಹಾಕಿದ ಗುಂಡಿ ಬಣ್ಣ ಬಯಲಾಗಿದೆ. ಇನ್ನೇನಾದರೂ ಜೋರು ಮಳೆಯಾಗಿದಿದ್ದರೆ ಇಡೀ ರಸ್ತೆಯೇ ಕಿತ್ತೊಗುತ್ತಿತ್ತು. ಜನರ ಹಣವನ್ನು ಕೊಳ್ಳೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಸರ್ಕಾರಕ್ಕೆ ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ.
ಇದನ್ನೂ ಓದಿ:
Viral Post: ನಾಯಂಡಹಳ್ಳಿ ಜಂಕ್ಷನ್ನಲ್ಲಿ ರಸ್ತೆಗುಂಡಿ ಮುಚ್ಚಿದ ಟ್ರಾಫಿಕ್ ಪೊಲೀಸರು: ನೆಟ್ಟಿಗರ ಮೆಚ್ಚುಗೆ
ನಾಯಂಡಹಳ್ಳಿ-ಕೆಂಗೇರಿ ನಡುವೆ ನಮ್ಮ ಮೆಟ್ರೋ ಮಾರ್ಗದಲ್ಲಿ ಕಳಪೆ ರಸ್ತೆಗಳ ನಿರ್ಮಾಣ: ಬಿಬಿಎಂಪಿಗೆ ಆತಂಕ