ರಜೆ ಮುಗಿಸಿ ಬೆಂಗಳೂರಿಗೆ ಬಂದ ಜನ: ನಮ್ಮ ಮೆಟ್ರೋದಲ್ಲಿ ಜನಜಂಗುಳಿ
ದೀಪಾವಳಿ ಮತ್ತು ವೀಕೆಂಡ್ ಸಾಲುಸಾಲು ರಜೆ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳಿದ್ದ ಜನರು ಈಗ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಟ್ರಾಫಿಕ್ ಕಿರಿಕಿರಿ ಬಿಟ್ಟು ಜನರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಮುಂದಾದರು. ಇದರಿಂದ ಹಸಿರು ಮಾರ್ಗದ ಮೆಟ್ರೋ ರೈಲುಗಳು ಫುಲ್ ರಶ್ ಆಗಿದ್ದವು.
ದೀಪಾವಳಿ ಮತ್ತು ವೀಕೆಂಡ್ ಸಾಲುಸಾಲು ರಜೆ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳಿದ್ದ ಜನರು ಈಗ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ರಜೆ ಮುಗಿಸಿಕೊಂಡು ಮತ್ತೆ ಉದ್ಯೋಗಕ್ಕೆ ತೆರಳಲು ಬೆಂಗಳೂರಿನತ್ತ ಮುಖ ಮಾಡಿದ್ದ ಜನರಿಗೆ ನಗರ ಪ್ರವೇಶದಲ್ಲೇ ಟ್ರಾಫಿಕ್ ಬಿಸಿ ತಟ್ಟಿದೆ. ನಗರದೊಳಗೆ ಪ್ರವೇಶಿಸಲು ಗಂಟೆಗಟ್ಟಲೆ ಟ್ರಾಫಿಕ್ನಲ್ಲಿ ನಿಲ್ಲುವಂತಾಯಿತು. ಟ್ರಾಫಿಕ್ ಕಿರಿಕಿರಿ ತಪ್ಪಿಸಿಕೊಳ್ಳಲು ಜನರು ನಮ್ಮ ಮೆಟ್ರೋದತ್ತ ಬಂದರು. ಹೀಗಾಗಿ ಹಸಿರು ಮಾರ್ಗದ ಮೆಟ್ರೋ ರೈಲುಗಳು ಫುಲ್ ರಶ್ ಆಗಿದ್ದವು. ನಾಗಸಂದ್ರದ ಮೆಟ್ರೋ ನಿಲ್ದಾಣದಲ್ಲಿ ಭಾರಿ ಜನಜಂಗುಳಿ ಇತ್ತು. ಮೆಟ್ರೋ ನಿಲ್ದಾಣದ ಹೊರಗೂ ಜನರು ಸಾಲುಗಟ್ಟಿ ನಿಂತಿದ್ದರು. ನಾಗಸಂದ್ರದ ಮೆಟ್ರೋ ನಿಲ್ದಾಣ ಜನರಿಂದ ತುಂಬಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Nov 04, 2024 11:03 AM