ಜೈಲಿಂದ ನೇರವಾಗಿ ದೇವೇಗೌಡರ ಮನೆಗೆ ಬಂದಿರುವ ಹೆಚ್ ಡಿ ರೇವಣ್ಣರನ್ನು ನೋಡಲು ಸಾವಿರಾರು ಜನರ ಜಮಾವಣೆ

|

Updated on: May 14, 2024 | 4:28 PM

ಅವರು ಜೈಲಿಂದ ಹೊರಬಂದ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಸಾವಿರಾರು ಜನ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಅವರನ್ನು ನೋಡಲು ಅವರ ಆರೋಗ್ಯದ ಬಗ್ಗೆ ವಿಚಾರಿಸಲು ದೇವೇಗೌಡರ ಮನೆಗೆ ದೌಡಾಯಿಸಿದರು. ಸಮಯ ಕಳೆದಂತೆಲ್ಲ ದೇವೇಗೌಡರ ಮನೆ ಸುತ್ತಮುತ್ತ ಸೇರಿದ ಜನರ ಸಂಖ್ಯೆಯೂ ಹೆಚ್ಚುತ್ತಾ ಸಾಗಿತು.

ಬೆಂಗಳೂರು: ಈಗಾಗಲೇ ವರದಿಯಾಗಿರುವಂತೆ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿ ಬಂಧನಕ್ಕೊಳಗಾಗಿದ್ದ ಹೊಳೆನರಸೀಪುರದ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರು ಜಾಮೀನು ಪಡೆದು ಜೈಲಿಂದ ಹೊರಬಂದಿದ್ದಾರೆ. ರೇವಣ್ಣ ಅವರನ್ನು ನಗರದ ಪದ್ಮನಾಭನಗರದಲ್ಲಿರುವ (Padmanabhanagar) ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (HD Devegowda) ಅವರ ಮನೆಯಿಂದ ಬಂಧಿಸಲಾಗಿತ್ತು. ಜೈಲಿಂದ ಬಿಡುಗಡೆಯಾದ ಬಳಿಕ ಅವರು ನೇರವಾಗಿ ತಮ್ಮ ತಂದೆಯ ಮನೆಗೆ ಬಂದಿದ್ದಾರೆ. ರೇವಣ್ಣ ರಾಜಕಾರಣದಲ್ಲಿ ಪ್ರಭಾವಿ ನಾಯಕರಾದರೂ ಅವರ ಕಿರಿಯ ಸಹೋದರ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರಷ್ಟು ಜನಪ್ರಿಯರಲ್ಲ. ಆದರೆ ಅವರು ಜೈಲಿಂದ ಹೊರಬಂದ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಸಾವಿರಾರು ಜನ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಅವರನ್ನು ನೋಡಲು ಅವರ ಆರೋಗ್ಯದ ಬಗ್ಗೆ ವಿಚಾರಿಸಲು ದೇವೇಗೌಡರ ಮನೆಗೆ ದೌಡಾಯಿಸಿದರು. ಸಮಯ ಕಳೆದಂತೆಲ್ಲ ದೇವೇಗೌಡರ ಮನೆ ಸುತ್ತಮುತ್ತ ಸೇರಿದ ಜನರ ಸಂಖ್ಯೆಯೂ ಹೆಚ್ಚುತ್ತಾ ಸಾಗಿತು. ಜೆಡಿಎಸ್ ಪಕ್ಷದ ಪ್ರಮುಖರು ಸಹ ರೇವಣ್ಣರನ್ನು ಕಂಡು ಮಾತಾಡಲು ಆಗಮಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನನ್ನ ಕುಟುಂಬವೇ ಬೇರೆ, ಹೆಚ್ ಡಿ ರೇವಣ್ಣ ಕುಟುಂಬವೇ ಬೇರೆ, ನಮ್ಮ ವ್ಯವಹಾರಗಳೂ ಬೇರೆ ಬೇರೆ: ಹೆಚ್ ಡಿ ಕುಮಾರಸ್ವಾಮಿ