ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?

Updated on: Jan 01, 2026 | 5:27 PM

ಹೊಸ ವರ್ಷದ ಮೊದಲ ದಿನವೇ ದಕ್ಷಿಣ ಬೆಂಗಳೂರಿನ ಆರ್‌ವಿ ರೋಡ್ ಮೆಟ್ರೋ ನಿಲ್ದಾಣದಿಂದ ಉತ್ತರ ಬೆಂಗಳೂರಿನ ಓರಾಯನ್ ಮಾಲ್ ಸಮೀಪದ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದವರೆಗೆ ಪಾದಚಾರಿಗಳು ಹೆಜ್ಜೆ ಹಾಕಿದ್ದಾರೆ. ಪಾದಚಾರಿ ಮಾರ್ಗದ ಅಗತ್ಯ ಮತ್ತು ಪಾದಚಾರಿಗಳ ಹಕ್ಕು ಸಾರುವ ನಿಟ್ಟಿನಲ್ಲಿ ನಡೆದ 26 ಕಿ.ಮೀ. ನಡಿಗೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು.

ಬೆಂಗಳೂರು, ಜನವರಿ 01: ಪಾದಚಾರಿ ಮಾರ್ಗದ ಅಗತ್ಯ ಮತ್ತು ಪಾದಚಾರಿಗಳ ಹಕ್ಕು ಸಾರುವ ನಿಟ್ಟಿನಲ್ಲಿ 26 ಕಿ.ಮೀ. ನಡಿಗೆ ಬೆಂಗಳೂರಲ್ಲಿ ನಡೆದಿದೆ. ದಕ್ಷಿಣ ಬೆಂಗಳೂರಿನ ಆರ್‌ವಿ ರೋಡ್ ಮೆಟ್ರೋ ನಿಲ್ದಾಣದಿಂದ ಉತ್ತರ ಬೆಂಗಳೂರಿನ ಓರಾಯನ್ ಮಾಲ್ ಸಮೀಪದ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದವರೆಗೆ ಪಾದಚಾರಿಗಳು ಹೆಜ್ಜೆ ಹಾಕಿದ್ದಾರೆ. ಲಾಲ್‌ಬಾಗ್, ಜಯನಗರ, ಕಬ್ಬನ್ ಪಾರ್ಕ್, ಉಲ್ಸೂರು ಕೆರೆ, ಶಿವಾಜಿನಗರ ಮತ್ತು ಮೇಖ್ರಿ ಸರ್ಕಲ್ ಸೇರಿದಂತೆ ನಗರದ ಪ್ರಮುಖ ಸ್ಥಳಗಳ ಮೂಲಕ ಪಾದಚಾರಿಗಳು ಸಾಗಿದ್ದಾರೆ. ವಾಕಲೂರು ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಂಯುಕ್ತವಾಗಿ ಕಾರ್ಯಕ್ರಮ ಆಯೋಜಿಸಿತ್ತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.