ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಅಮಾಯಕ ವ್ಯಕ್ತಿಯನ್ನು ಮಕ್ಕಳ ಕಳ್ಳನೆಂದು ಭಾವಿಸಿ ಕೂಡಿಹಾಕಿದ ಘಟನೆ!
ಈ ಮನುಷ್ಯ ಗಡದ ದುರ್ಗಮ್ಮ ದೇವಸ್ಥಾನ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಜನ ಅವನನ್ನು ಹಿಡಿದು ಕೂಡಿಹಾಕಿ ಪೊಲೀಸರನ್ನು ಕರೆಸಿದ್ದಾರೆ.
ಇದು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣ. ಜನ ನೆರೆದಿರೋದನ್ನು ನೋಡಿದರೆ ಏನೋ ಸಂಭವಿಸಿದೆ ಅನ್ನೋದು ದೃಢಪಡುತ್ತದೆ. ಅಸಲಿಗೆ ನಡೆದಿರುವ ಸಂಗತಿಯೆಂದರೆ, ಒಬ್ಬ ಅಮಾಯಕ (innocent) ವ್ಯಕ್ತಿಯನ್ನು ಮಕ್ಕಳ ಕಳ್ಳ ಅಂತ ಭಾವಿಸಿ ಕೈಕಾಲು ಕಟ್ಟಿ ಕೂರಿಸಲಾಗಿದೆ. ಸ್ಥಳದಲ್ಲಿ ಪೊಲೀಸರು (police) ನೆರೆದಿರಿವುದನ್ನು ಸಹ ನೀವು ನೋಡಬಹುದು. ಈ ಮನುಷ್ಯ ಗಡದ ದುರ್ಗಮ್ಮ ದೇವಸ್ಥಾನ (Durgamma temple) ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಜನ ಅವನನ್ನು ಹಿಡಿದು ಕೂಡಿಹಾಕಿ ಪೊಲೀಸರನ್ನು ಕರೆಸಿದ್ದಾರೆ. ಅಂತಿಮವಾಗಿ ಪೊಲೀಸರು ಅವನನ್ನು ಆಟೋವೊಂದರಲ್ಲಿ ಸ್ಟೇಶನ್ ಗೆ ಕರೆದೊಯ್ದರು.
Latest Videos