ಆರೋಗ್ಯ ಸಚಿವರ ಕಾರ್ಯಕ್ರಮದಲ್ಲೂ ಜನ ಮಾಸ್ಕ್ ಧರಿಸುವುದಿಲ್ಲ ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವುದಿಲ್ಲ!!
ವಿಡಿಯೋನಲ್ಲಿ ಸಚಿವ ಸುಧಾಕರ್, ನಾರಾಯಣಸ್ವಾಮಿ ಮತ್ತು ಕೇಂದ್ರ ಸಚಿವರೊಂದಿಗೆ ಮಾತಾಡುತ್ತಿರುವ ಒಬ್ಬ ಮಹಿಳೆ ಮಾಸ್ಕ್ ಧರಿಸದಿರುವುದು ನಿಮಗೆ ಕಾಣುತ್ತದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕಾರ್ಯಕ್ರಮದ ಭಾಗವಾಗಿದ್ದ ಅಧಿಕಾರಿಗಳು ಮತ್ತು ಸಾರ್ವಜನಿಕರಲ್ಲಿ ಅನೇಕರು ಮಾಸ್ಕ್ ಧರಿಸಿರಲಿಲ್ಲ.
ಕಾಂಗ್ರೆಸ್ ಪಕ್ಷದವರು ಮೇಕೆದಾಟು ಯೋಜನೆ ಅನುಷ್ಠಾನ ಆಗ್ರಹಿಸಿ ಪಾದಯಾತ್ರೆ ಮಾಡುತ್ತಿದ್ದಾಗ ಬಿಜೆಪಿ ಪಕ್ಷದ ಧುರೀಣರು (BJP leaders) ಪಾದಯಾತ್ರೆಯಲ್ಲಿ ಪಾಲ್ಗೊಂಡ ನಾಯಕರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಕೋವಿಡ್ ನಿಯಮಾವಳಿ ಪಾಲಿಸುತ್ತಿಲ್ಲ ಎಂದು ಪ್ರತಿದಿನ ಜರಿದರು. ಕಾಂಗ್ರೆಸ್ ನಾಯಕರು (Congress leaders) ಮಾಡಿದ ತಪ್ಪನ್ನು ನಾವು ಎಡಬಿಡದೆ ವರದಿ ಮಾಡಿದ್ದು ಎಲ್ಲ ಕನ್ನಡಿಗರಿಗೆ ಗೊತ್ತಿದೆ. ಅದೇ ಸಮಯ ನಾವು ಬಿಜೆಪಿ ನಾಯಕರು, ಸಚಿವರು ಮಾಸ್ಕ್ ಧರಿಸದೆ ನಡೆಸಿದ ಸಾರ್ವಜನಿಕ ಸಭೆಗಳ ಬಗ್ಗೆಯೂ ಮಾತಾಡಿದ್ದೇವೆ. ಇಲ್ಲಿರುವ ವಿಡಿಯೋ ನೋಡಿ. ಆರೋಗ್ಯ ಸಚಿವ ಕೆ ಸುಧಾಕರ್ (K Sudhakar) ಅವರು ಬುಧವಾರದಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಒಂದು ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ (A Narayan Swamy) ಅವರಲ್ಲದೆ ಬೇರೆ ಕೆಲ ಗಣ್ಯರು ಸಹ ಭಾಗವಹಿಸಿದ್ದರು.
ವಿಡಿಯೋನಲ್ಲಿ ಸಚಿವ ಸುಧಾಕರ್, ನಾರಾಯಣಸ್ವಾಮಿ ಮತ್ತು ಕೇಂದ್ರ ಸಚಿವರೊಂದಿಗೆ ಮಾತಾಡುತ್ತಿರುವ ಒಬ್ಬ ಮಹಿಳೆ ಮಾಸ್ಕ್ ಧರಿಸದಿರುವುದು ನಿಮಗೆ ಕಾಣುತ್ತದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕಾರ್ಯಕ್ರಮದ ಭಾಗವಾಗಿದ್ದ ಅಧಿಕಾರಿಗಳು ಮತ್ತು ಸಾರ್ವಜನಿಕರಲ್ಲಿ ಅನೇಕರು ಮಾಸ್ಕ್ ಧರಿಸಿರಲಿಲ್ಲ. ದೈಹಿಕ ಅಂತರ ಕಾಯ್ದುಕೊಳ್ಳುವ ನಿಯಮ ಕಾರ್ಯಕ್ರಮ ಮುಗಿಯುವವರೆಗೆ ಜಾರಿಯಲ್ಲಿರಲಿಲ್ಲ. ಸಚಿವರು ಸ್ವಲ್ಪ ಸಮಯದ ನಂತರ ಮಾಸ್ಕ್ಗಳನ್ನು ಧರಿಸಿದ್ದು ನಿಜ.
ರಾಜ್ಯದಲ್ಲಿ ಈಗ ಪ್ರತಿದಿನ 40,000 ಕ್ಕಿಂತ ಹೆಚ್ಚು ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿವೆ. ಇಂಥ ಸಮಯದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವುದು ಸರಿಯೇ? ಜನ ಜಾತ್ರೆಯಂತೆ ನೆರೆಯಲು ಯಾಕೆ ಅವಕಾಶ ನೀಡಲಾಗುತ್ತಿದೆ ಅದೂ ಆರೋಗ್ಯ ಸಚಿವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ?
ಇದನ್ನೂ ಓದಿ: ಐಫೋನ್ ರಿಂಗ್ಟೋನ್ ಶಬ್ದದಂತೆ ಧ್ವನಿ ಹೊರಡಿಸುವ ಗಿಳಿ: ವಿಡಿಯೋ ವೈರಲ್