ಸಿಎಫ್ಐ ಕಾರ್ಯಕರ್ತರಿಗೆ ಮೆರವಣಿಗೆ ಆಯೋಜಿಸಲು ಅನುಮತಿ ನೀಡಿಲ್ಲ ಎಂದರು ಮಂಗಳೂರು ಪೊಲೀಸ್ ಕಮೀಶನರ್

Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 16, 2022 | 4:00 PM

ಮಂಗಳೂರಿನ ಪೊಲೀಸ್ ಕಮೀಶನರ್ ಎನ್  ಶಶಿಕುಮಾರ್ ಅವರು ಮೆರವಣಿಗೆಗೆ ಆವಕಾಶ ನೀಡಿಲ್ಲ, ಕಾರ್ಯಕ್ರಮ ಮಾಡಿಕೊಳ್ಳಬಹುದು ಎಂದು ಸಿಎಫ್ಐ ಗೆ ತಿಳಿಸಲಾಗಿದೆ ಎಂದು ಹೇಳಿದರು.

ಮಂಗಳೂರು: ಹಿಜಾಬ್ ವಿವಾದ (hijab row) ಇನ್ನೂ ತಣ್ಣಗಾಗುತ್ತಿಲ್ಲ ಮಾರಾಯ್ರೇ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI) ಕಾರ್ಯಕರ್ತರು ಮಂಗಳೂರಿನ ಶನಿವಾರದಂದು ವಿದ್ಯಾರ್ಥಿನಿಯರ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸುವ ಯೋಜನೆ ಹಾಕಿಕೊಂಡಿದ್ದರು. ಆದರೆ ಮಂಗಳೂರಿನ ಪೊಲೀಸ್ ಕಮೀಶನರ್ ಎನ್  ಶಶಿಕುಮಾರ್ ಅವರು ಮೆರವಣಿಗೆಗೆ ಆವಕಾಶ ನೀಡಿಲ್ಲ, ಕಾರ್ಯಕ್ರಮ ಮಾಡಿಕೊಳ್ಳಬಹುದು ಎಂದು ಸಿಎಫ್ಐ ಗೆ ತಿಳಿಸಲಾಗಿದೆ ಎಂದು ಹೇಳಿದರು. ಯಾವುದೇ ಅಹಿತಕರ ಘಟನೆ ಜರುಗಬಾರದೆನ್ನುವ ಕಾರಣ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಅವರು ಟಿವಿ9 ವರದಿಗಾರನಿಗೆ ಹೇಳಿದರು.