ಚಿಕ್ಕೋಡಿ ಬಳಿ ಸೇತುವೆ ಮೇಲಿಂದ ಕಾರು ನದಿಗೆ ಬಿದ್ದರೂ ಪವಾಡಸದೃಶವಾಗಿ ಬದುಕುಳಿದ ಚಾಲಕ

ಚಿಕ್ಕೋಡಿ ಬಳಿ ಸೇತುವೆ ಮೇಲಿಂದ ಕಾರು ನದಿಗೆ ಬಿದ್ದರೂ ಪವಾಡಸದೃಶವಾಗಿ ಬದುಕುಳಿದ ಚಾಲಕ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 16, 2022 | 12:58 PM

ಸೇತುವೆ ಮೇಲಿಂದ ನದಿಗೆ ಬಿದ್ದರೂ ಬದುಕುಳಿದ ಚಾಲಕನನ್ನು ಸ್ಥಳೀಯರು ಹಗ್ಗದ ಸಹಾಯದಿಂದ ಮೇಲಕ್ಕೆಳೆದಿದ್ದಾರೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನಲ್ಲಿರುವ ದಾನವಾಡ-ದತ್ತವಾಡ ಸೇತುವೆ ಮೇಲೆ ಕಾರು ಓಡಿಸಿಕೊಂಡು ಹೋಗುತ್ತಿದ್ದಾಗ ಅದರ ಚಾಲಕ ನಿಯಂತ್ರಣ ತಪ್ಪಿ ಕಾರು ಕೆಳಗೆ ಹರಿಯುತ್ತಿದ್ದ ದೂದಗಂಗಾ ನದಿಗೆ ಉರುಳಿ ಬಿದ್ದಿದೆ. ಆದರೆ ಚಾಲಕ ನಿಜಕ್ಕೂ ಅದೃಷ್ಟವಂತ ಮಾರಾಯ್ರೇ. ಸೇತುವೆ ಮೇಲಿಂದ ನದಿಗೆ ಬಿದ್ದರೂ ಬದುಕುಳಿದ ಅವನನ್ನು ಸ್ಥಳೀಯರು ಹಗ್ಗದ ಸಹಾಯದಿಂದ ಮೇಲಕ್ಕೆ ಎಳೆದಿದ್ದಾರೆ.