Karnataka Budget Session: ಪಾಕಿಸ್ತಾನ್ ಪರ ಘೋಷಣೆ ಕೂಗಿರುವ ವ್ಯಕ್ತಿ ಯಾರೇ ಆಗಿರಲಿ, ಶಿಕ್ಷಿಸದೆ ಬಿಡಲ್ಲ: ಜಿ ಪರಮೇಶ್ವರ್, ಗೃಹ ಸಚಿವ

|

Updated on: Feb 28, 2024 | 5:37 PM

ಎಫ್ ಎಸ್ ಎಲ್ ವರದಿಯಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದು ಸಿದ್ಧಪಟ್ಟರೆ ಸರ್ಕಾರ ಒಂದು ಕ್ಷಣವೂ ವಿಳಂಬಿಸದೆ ಕೂಗಿದವನ ವಿರುದ್ಧ ಕಾನೂನಲ್ಲಿ ಹೇಳಿರುವ ಶಿಕ್ಷೆಗೆ ಗುರಿಪಡಿಸಲಾಗುವುದು, ಈಗಾಗಲೇ ಎಫ್ ಐಆರ್ ದಾಖಲಾಗಿದ್ದು ಬಿಜೆಪಿ ನೀಡಿರುವ ದೂರನ್ನು ಅದಕ್ಕೆ ಸೇರಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.

ಬೆಂಗಳೂರು: ಪಾಕಿಸ್ತಾನ್ ಜಿಂದಾಬಾದ್ ಎಂದು ನಿನ್ನೆ ವಿಧಾನಸೌಧದಲ್ಲಿ ಕೂಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಸಭಾ ಅಧಿವೇಶನದಲ್ಲಿ ಇಂದು ನಡೆದ ಬಿರುಸಿನ ಚರ್ಚೆ ಮತ್ತು ವಿರೋಧ ಪಕ್ಷಗಳ ನಾಯಕರು ಎತ್ತಿದ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ ಗೃಹ ಸಚಿವ ಜಿ ಪರಮೇಶ್ವರ್, ಸದನದಲ್ಲಿ ಚರ್ಚಯಾಗಿರುವ ವಿಷಯ ವೈಜ್ಞಾನಿಕವಾಗಿ ದೃಢಪಡುವ ಅವಶ್ಯಕತೆ ಇದೆ. ಎಫ್ ಎಸ್ ಎಲ್ ವರದಿಯಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದು ಸಿದ್ಧಪಟ್ಟರೆ ಸರ್ಕಾರ ಒಂದು ಕ್ಷಣವೂ ವಿಳಂಬಿಸದೆ ಕೂಗಿದವನ ವಿರುದ್ಧ ಕಾನೂನಲ್ಲಿ ಹೇಳಿರುವ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಹೇಳಿದರು. ಈಗಾಗಲೇ ಎಫ್ ಐಆರ್ ದಾಖಲಾಗಿದ್ದು ಬಿಜೆಪಿ ನೀಡಿರುವ ದೂರನ್ನು ಅದಕ್ಕೆ ಸೇರಿಸಲಾಗಿದೆ. ಪಾಕಿಸ್ತಾನ್ ಪರ ಘೋಷಣೆ ಕೂಗಿದವನು ಯಾರೇ ಆಗಿರಲಿ ಮತ್ತು ಯಾರ ಪರವಾಗಿ ಬಂದವನೇ ಆಗಿರಲಿ, ಅವನನ್ನು ರಕ್ಷಿಸುವ ಪ್ರಶ್ನೆಯೇ ಏಳಲ್ಲ, ಅವನಿಗೆ ಖಂಡಿತ ಶಿಕ್ಷೆಯಾಗಲಿದೆ ಎಂದು ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Karnataka Assembly Session: ವಿಭಜನೆಯ ನಂತರ ದೇಶ ವಿರೋಧಿ ಚಟುವಟಿಕೆಗಳು ನಡೆಯುವುದನ್ನು ಅಂಬೇಡ್ಕರ್ ಆಗಲೇ ಊಹಿಸಿದ್ದರು: ಬಸನಗೌಡ ಪಾಟೀಲ್ ಯತ್ನಾಳ್

Published On - 2:35 pm, Wed, 28 February 24

Follow us on