ಪಾಕ್ ಪರ ಘೋಷಣೆ ಕೂಗಿದವರಿಗೆ ಕೆಟ್ಟ ಪದ ಬೈದ ಯತ್ನಾಳ್: ಸ್ಪೀಕರ್ ಖಾದರ್ ಬೆಂಬಲ!
ವಿಧಾನಸಭೆ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಬುಧವಾರದ ವಿಧಾನಸಭೆ ಕಲಾಪದಲ್ಲಿ ತೀವ್ರ ಚರ್ಚೆ ಗ್ರಾಸವಾಯಿತು. ಇದೇ ವೇಳೆ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೆಲ ಆಕ್ಷೇಪಾರ್ಹ ಪದ ಬಳಸಿದ್ದು ಗದ್ದಲಕ್ಕೆ ಕಾರಣವಾಯಿತು. ನಂತರ ಕೋಲಾಹಲ ತಣ್ಣಗಾಗಿಸಿದ ಸ್ಪೀಕರ್ ಯುಟಿ ಖಾದರ್, ಪಾಕ್ ಪರ ಘೋಷಣೆ ಕೂಗಿದವರಿಗೆ ನೀವು ಏನು ಹೇಳಿದರೂ ಸಮ್ಮತಿ ಇದೆ ಎಂದರು.
ಬೆಂಗಳೂರು, ಫೆಬ್ರವರಿ 28: ದೇಶದ ಅನ್ನ ತಿಂದು ಪಾಕಿಸ್ತಾನದ ಪರ ಘೋಷಣೆ ಕೂಗುವವರು ***, *** ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿಧಾನಸಭೆ ಕಲಾಪದಲ್ಲಿ (Assembly Session) ಆಕ್ಷೇಪಾರ್ಹ ಪದ ಬಳಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಯತ್ನಾಳ್ ಬಳಸಿದ ಪದಗಳಿಗೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಹಾಗಾದರೆ ನಾನು ಕೂಡಾ ಸೂ… ಮಗ, ಬೋ… ಮಗ ಎಂದು ಮಾತನಾಡುತ್ತೇನೆ ಎಂದ ಶಾಸಕ ರಾಯರೆಡ್ಡಿ (Basavaraj Rayareddy) ಹೇಳಿದರು.
ಚರ್ಚೆ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಸ್ಪೀಕರ್ ಯುಟಿ ಖಾದರ್, ‘ಯತ್ನಾಳ್ ಅವರು ನಿಮ್ಮನ್ನು (ಕಾಂಗ್ರೆಸ್ ನಾಯಕರನ್ನು) ಬೈಯ್ದಿಲ್ಲ. ಅವರು ಪಾಕಿಸ್ತಾನ ಪರ ಇರುವವರನ್ನು ಬೈದಿದ್ದಾರಷ್ಟೆ. ಪಾಕ್ ಪರ ಘೋಷಣೆ ಕೂಗುವವರಿಗೆ ನೀವು ಯಾವುದೇ ಪದ ಬಳಕೆ ಮಾಡಿದರೂ ನನ್ನ ಅನುಮತಿ ಇದೆ’ ಎಂದು ಹೇಳಿದರು. ಈ ವೇಳೆ, ಎಲ್ಲೋ ಒಂದು ಕಡೆ ನಿಮ್ಮಂತಹ ದೇಶಭಕ್ತರು ಇನ್ನೂ ಇದ್ದಾರೆ ಎಂದು ಯತ್ನಾಳ್ ಹೇಳಿದರು.
ಮತ್ತೆ ಮಾತು ಮುಂದುವರಿಸಿದ ಯತ್ನಾಳ್, ‘ಇನ್ನೇನು ಅವರನ್ನು (ಪಾಕ್ ಪರ ಘೋಷಣೆ ಕೂಗುವವರನ್ನು) ಮುತ್ತೈದೆ ಮಕ್ಕಳು, ಮೈ ಬ್ರದರ್ಸ್ ಎನ್ನಬೇಕಾ’ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ವಿಧಾನಪರಿಷತ್‌ನಲ್ಲಿ ಗೂಂಡಾವರ್ತನೆ: ಸಭಾಪತಿ ಕುರ್ಚಿ ಎದುರೇ ಕೈಕೈ ಮಿಲಾಯಿಸಲು ಮುಂದಾದ ಸದಸ್ಯರು
ನಂತರ ಪ್ರತಿಕ್ರಿಯಿಸಿದ ರಾಯರೆಡ್ಡಿ, ನಾನೂ ಬಾಯಿತಪ್ಪಿ ಮಾತನಾಡಿದೆ. ಆದರೆ, ಯತ್ನಾಳ್ ಬಳಸಿದ ಪದಗಳನ್ನು ಕಡತದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದರು. ಮತ್ತೊಂದೆಡೆ, ಎಂಬಿ ಪಾಟೀಲ್ ಹಾಗೂ ಯತ್ನಾಳ್ ನಡುವೆಯೂ ವಾಕ್ಸಮರ ನಡೆಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ