ಯುದ್ಧಗ್ರಸ್ಥ ಉಕ್ರೇನಲ್ಲಿ ವ್ಯಕ್ತಿಯೊಬ್ಬ ಮನೆಯಿಂದ ಹೊರಬಂದ ಇಲಿಯನ್ನು ಹಿಡಿಯಲು ಹರಸಾಹಸಪಟ್ಟರು!
ತನ್ನನ್ನು ಹಿಡಿಯದ ಹಾಗೆ ಇಲಿ ತಪ್ಪಿಸಿಕೊಳ್ಳುತ್ತಿರುವ ರೀತಿ ನೋಡಿ ಮಾರಾಯ್ರೇ. ಫುಟ್ಬಾಲ್ ಮೈದಾನದಲ್ಲಿ ಲಿಯೋನಿಲ್ ಮೆಸ್ಸೀ ಎದುರಾಳಿ ಆಟಗಾರನಿಗೆ ಚೆಂಡನ್ನು ವಂಚಿಸಿ ಮುನ್ನುಗ್ಗಿದಂತಿದೆ.
ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin,) ಅವರು ಉಕ್ರೇನ್ ಮೇಲೆ ದಾಳಿ ನಡೆಸಿ ಅದರ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ (Volodymyr Zelensky) ಅವರನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದರೆ ಉಕ್ರೇನಿನ ಪ್ರಜೆಯೊಬ್ಬರು ತಾವು ಸಾಕಿದ ಇಲಿಯನ್ನು (rat) ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಸಾಕು ಇಲಿ? ಹೌದು ಮಾರಾಯ್ರೇ, ಇಲಿ ಸಾಕುವುದು ಸಹ ಒಂದು ಹವ್ಯಾಸ ಅನಿಸಿಕೊಂಡಿರುವ ಕಾಲವಿದು. ಬೆಕ್ಕು ಮತ್ತು ನಾಯಿಗಳನ್ನು ಸಾಕಿದಷ್ಟೇ ಸಲೀಸಾಗಿ ಇಲಿಗಳನ್ನು ಸಾಕಲಾಗುತ್ತಿದೆ. ಇಲಿ ಈಗ ಸಾಕು ಪ್ರಾಣಿಗಳ ಕೆಟೆಗೆರಿಯಲ್ಲಿ! ಕೇವಲ ಉಕ್ರೇನ್ ಅಂತಲ್ಲ, ಕೆಲ ಇತರ ದೇಶಗಳಲ್ಲೂ ಮೂಷಿಕಗಳನ್ನು ಸಾಕುತ್ತಾರೆ.
ರಷ್ಯಾ ವೈಮಾನಿಕ ದಾಳಿ ಆರಂಭಿಸಿರುವ ಸಮಯದಲ್ಲಿ ಇಲಿ ಮನೆಯಿಂದ ಆಚೆ ಬಂದಿದೆ. ಸಹಜವಾಗೇ ಅದನ್ನು ಸಾಕಿರುವ ವ್ಯಕ್ತಿಗೆ ಆತಂಕವಾಗದಿರುತ್ತದೆ. ಅದನ್ನು ಮನೆಯೊಳಗೆ ಕರೆದೊಯ್ಯಲು ವ್ಯಕ್ತಿ ಪ್ರಯತ್ನಿಸುತ್ತಿದ್ದಾನೆ. ಆದರೆ, ಪ್ರಾಯಶಃ ಬಹಳ ದಿನಗಳಿಂದ ಮನೆಯಲ್ಲಿದ್ದು ಬೇಸರಗೊಂಡಿದ್ದ ಇಲಿಗೆ ಅಷ್ಟು ಬೇಗ ಮನೆಯೊಳಗೆ ಹೋಗುವುದು ಇಷ್ಟವಿಲ್ಲ. ಹಾಗಾಗೇ ತನ್ನ ಮಾಲೀಕನನ್ನು ಗೋಳು ಹೊಯ್ದುಕೊಳ್ಳುತ್ತಿದೆ.
ತನ್ನನ್ನು ಹಿಡಿಯದ ಹಾಗೆ ಇಲಿ ತಪ್ಪಿಸಿಕೊಳ್ಳುತ್ತಿರುವ ರೀತಿ ನೋಡಿ ಮಾರಾಯ್ರೇ. ಫುಟ್ಬಾಲ್ ಮೈದಾನದಲ್ಲಿ ಲಿಯೋನಿಲ್ ಮೆಸ್ಸೀ ಎದುರಾಳಿ ಆಟಗಾರನಿಗೆ ಚೆಂಡನ್ನು ವಂಚಿಸಿ ಮುನ್ನುಗ್ಗಿದಂತಿದೆ.
ಉಕ್ರೇನ್ ಸ್ಥಿತಿಯ ಬಗ್ಗೆ ಗಂಭೀರವಾಗಿ ಮಾತಾಡುವುದಾದರೆ, ಅಲ್ಲಿನ ನಗರಗಳ ಮೇಲೆ ರಷ್ಯಾದ ಬಾಂಬ್ ದಾಳಿ ಮತ್ತಷ್ಟು ತೀವ್ರಗೊಂಡಿದೆ. ರಷ್ಯಾದ ಮೇಲೆ ಯುಎಸ್, ಯುಕೆ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳು ಹೆಚ್ಚುತ್ತಿದ್ದಂತೆ ಪುಟಿನ್ ಅವರಿಗೆ ಜೆಲೆನ್ಸ್ಕಿ ಮೇಲೆ ಕೋಪ ಹೆಚ್ಚುತ್ತಿದೆ. ಅಮಾಯಕ ನಾಗರಿಕರು ಅವರ ಹುಚ್ಚಾಟಕ್ಕೆ ಬಲಿಯಾಗುತ್ತಿದ್ದಾರೆ.
ಇದನ್ನೂ ಓದಿ: Viral Video: ಟ್ರೆಡ್‌ಮಿಲ್ ಮೇಲೆ ವಾಕ್ ಮಾಡಿದ ಬಾತುಕೋಳಿ; ಮುದ್ದಾದ ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?