‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದಲ್ಲಿ ಹಳೆಯ ದಿನಗಳನ್ನು ನೆನಪಿಸಿಕೊಂಡ ಸಂಜಿತ್ ಹೆಗಡೆ
ನಾನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 9 ವ್ಯಕ್ತಿಗಳಿಗೆ ಸನ್ಮಾನ ಮಾಡುವ ಕಾರ್ಯ ನಡೆದಿದೆ. ರಶ್ಮಿಕಾ ಮಂದಣ್ಣ, ಶಿವರಾಜ್ಕುಮಾರ್ ಮೊದಲಾದವರಿಗೆ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ರವಿಚಂದ್ರನ್ ಮೊದಲಾದವರು ಆಗಮಿಸಿದ್ದರು.
ಗಾಯಕ ಸಂಜಿತ್ ಹೆಗಡೆಗೆ ಹೆಚ್ಚು ಬೇಡಿಕೆ ಇದೆ. ಅವರು ‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ‘ಟಿವಿ9 ಬಗ್ಗೆ ಖುಷಿ ಇದೆ. ನವ ನಕ್ಷತ್ರದಲ್ಲಿ ಸಂಗೀತ ಕ್ಷೇತ್ರದಿಂದ ನನ್ನನ್ನು ಆಯ್ಕೆ ಮಾಡಿದ್ದೀರಿ. ನಾನು ಸಣ್ಣ ಆರ್ಟಿಸ್ಟ್. ಆದಾಗ್ಯೂ ನೀವು ನನ್ನನ್ನು ಕರೆದಿದ್ದೀರಿ. ಸನ್ಮಾನ ಮಾಡಿದ್ದೀರಿ. ಟಿವಿ9 ಕನ್ನಡಕ್ಕೆ ನಾನು ಥ್ಯಾಂಕ್ಸ್ ಹೇಳಬೇಕು’ ಎಂದರು ಸಂಜಿತ್. ಈ ವೇಳೆ ಅವರು ತಮ್ಮ ಸಂಗೀತ ಲೋಕದ ಜರ್ನಿ ಹೇಗಿತ್ತು, ಅದು ಆರಂಭವಾಗಿದ್ದು ಹೇಗೆ ಎನ್ನುವ ಬಗ್ಗೆಯೂ ಮೆಲುಕು ಹಾಕಿದರು. ಟಿವಿ9 ಕನ್ನಡ ‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ 9 ವ್ಯಕ್ತಿಗಳಿಗೆ ಸನ್ಮಾನ ಮಾಡುವ ಕಾರ್ಯ ನಡೆದಿದೆ. ರಶ್ಮಿಕಾ ಮಂದಣ್ಣ ಮೊದಲಾದವರಿಗೆ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ರವಿಚಂದ್ರನ್ ಮೊದಲಾದವರು ಆಗಮಿಸಿದ್ದರು. ಈ ವೇಳೆ ಅವರು ಟಿವಿ9 ಕನ್ನಡದ ಕಾರ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.
ಇದನ್ನೂ ಓದಿ: ‘ಒಳ್ಳೆಯ ಕೆಲಸಕ್ಕೆ ಇದು ಸ್ಫೂರ್ತಿ’; ನವನಕ್ಷತ್ರ ಸನ್ಮಾನ ಕುರಿತು ರಘು ದೀಕ್ಷಿತ್ ಮಾತು