PM Modi Ayodhya Live: ರಾಮನ ದರ್ಶನ ಬಳಿಕ ಅಯೋಧ್ಯೆಯಲ್ಲಿ ಮೋದಿ ರೋಡ್ ಶೋ
ಇದೇ ವರ್ಷ ಜನವರಿ 22 ರಂದು ಧರ್ಮಭೂಮಿ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಿತು. ಪ್ರಧಾನಿ ನರೇಂದ್ರ ಮೋದಿಯವರು ಮನೆ ಯಜಮಾನ ಹಾಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ಶ್ರೀರಾಮನ ಪ್ರಾಣ ಪ್ರತಿಷ್ಠಪನೆ ನೆರವೇರಿಸಿದ ಬಳಿಕ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಮತ್ತೆ ಅಯೋಧ್ಯೆಗೆ ತೆರಳಿದ್ದಾರೆ.
ಅಯೋಧ್ಯೆ ಭೇಟಿ, ಮೋದಿ ಅಯೋಧ್ಯೆ ರೋಡ್ ಶೋ, ಲೋಕಸಭೆ ಚುನಾವಣೆ, ಅಯೋಧ್ಯೆ, ಅಯೋಧ್ಯೆ ಶ್ರೀರಾಮ
ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ಬಳಿಕ ಮತ್ತು ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಇದೇ ಮೊದಲ ಬಾರಿಗೆ ಅಯೋಧ್ಯೆಗೆ ತೆರಳಿದ್ದಾರೆ. ಇಂದು (ಮೇ.05) ಸಂಜೆ 7 ಗಂಟೆಗೆ ಅಯೋಧ್ಯೆಯಗೆ ಆಗಮಿಸಿದ ಪ್ರಧಾನಿ ಮೋದಿಯವರು, ಬಾಲರಾಮನ ದರ್ಶನ ಪಡೆದರು. ರಾತ್ರಿ 7:15 ರ ಸುಮಾರಿಗೆ ಎರಡು ಕಿಮೀ ರೋಡ್ ಶೋ (Road Show) ನಡೆಸಿದರು. ಬಾಲರಾಮನ ದರ್ಶನ ಮತ್ತು ಪೂಜೆಯ ಬಳಿಕ ರೋಡ್ಶೋ ಆರಂಭಗೊಂಡಿದೆ. ಮೆಗಾ ರೋಡ್‌ಶೋದಲ್ಲಿ ಭಾರಿ ಜನ ಸಮೂಹ ಸೇರುವ ಸಾಧ್ಯತೆ ಇದೆ.
ಉತ್ತರ ಪ್ರದೇಶದ ಸಂಭಾಲ್, ಹತ್ರಾಸ್, ಆಗ್ರಾ, ಫತೇಪುರ್ ಸಿಕ್ರಿ, ಫಿರೋಜಾಬಾದ್, ಮೈನ್‌ಪುರಿ, ಎತಾಹ್, ಬದೌನ್, ಬರೇಲಿ ಮತ್ತು ಅಒನ್ಲಾ ಸೇರಿದಂತೆ ಹತ್ತು ಕ್ಷೇತ್ರಗಳಿಗೆ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಮುಂಚಿತವಾಗಿ ಮೋದಿ ಭೇಟಿ ನೀಡಲಿದ್ದಾರೆ.