PM Modi Interaction: ವಿಕಸಿತ್ ವೈಬ್ರೆಂಟ್ ಗ್ರಾಮ ಯೋಜನೆ; ಪ್ರಧಾನಿ ಜೊತೆ ಅನುಭವ ಹಂಚಿಕೊಂಡ ಯುವಜನರು

PM Modi interacts with students and youth: ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್​ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೈ ಭಾರತ್ ಅಭಿಯಾನದ ಭಾಗವಾಗಿ ಆಯೋಜನೆಯಾದ ವಿವಿವಿಪಿ ಕಾರ್ಯಕ್ರಮದಲ್ಲಿ 400ಕ್ಕೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೂನ್ 4ರಿಂದ 30ರವರೆಗೆ ನಡೆದ ಕಾರ್ಯಕ್ರಮದಲ್ಲಿ ತಮ್ಮ ಅನುಭವವನ್ನು ಈ ಮಕ್ಕಳು ಪ್ರಧಾನಿ ಜೊತೆ ಹಂಚಿಕೊಂಡರು.

PM Modi Interaction: ವಿಕಸಿತ್ ವೈಬ್ರೆಂಟ್ ಗ್ರಾಮ ಯೋಜನೆ; ಪ್ರಧಾನಿ ಜೊತೆ ಅನುಭವ ಹಂಚಿಕೊಂಡ ಯುವಜನರು
ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ

Updated on: Jul 26, 2026 | 5:53 PM

ನವದೆಹಲಿ, ಜುಲೈ 26: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್​ನಲ್ಲಿ (Viksit Vibrant Village Programme 2026) ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೈ ಭಾರತ್ ಪ್ಲಾಟ್​ಫಾರ್ಮ್ ವತಿಯಿಂದ ಆಯೋಜನೆಯಾದ ವಿವಿವಿಪಿ ಕಾರ್ಯಕ್ರಮದಲ್ಲಿ 400ಕ್ಕೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೂನ್ 4ರಿಂದ 30ರವರೆಗೆ ನಡೆದ ಕಾರ್ಯಕ್ರಮದಲ್ಲಿ ತಮ್ಮ ಅನುಭವವನ್ನು ಈ ಮಕ್ಕಳು ಪ್ರಧಾನಿ ಜೊತೆ ಹಂಚಿಕೊಂಡರು. ಗ್ರಾಮಸ್ಥರೊಂದಿಗಿನ ಒಡನಾಟ, ಅಲ್ಲಿ ಕಂಡಿರುವ ಅಭಿವೃದ್ಧಿ ಇತ್ಯಾದಿ ಎಲ್ಲವನ್ನೂ ಅವರು ಮೋದಿ ಜೊತೆ ಹಂಚಿಕೊಂಡಿದ್ದಾರೆ.

ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್ 2026 ಅನ್ನು ಎರಡು ಹಂತಗಳಲ್ಲಿ ಆಯೋಜನೆ ಮಾಡಲಾಗಿತ್ತು. ಲಡಾಖ್, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡ್​ನಾದ್ಯಂತ ಗಡಿಭಾಗದ 74 ಗ್ರಾಮಗಳಲ್ಲಿ ಜೂನ್ 4ರಿಂದ 30ರವರೆಗೆ ಎರಡು ಹಂತಗಳಲ್ಲಿ ಈ ಗ್ರಾಮ ಸೇವೆಯ ಕಾರ್ಯಕ್ರಮ ನಡೆಸಲಾಯಿತು.

ಇದನ್ನೂ ಓದಿ: PM Narendra Modi Interaction Live: ವಿಕಸಿತ್ ವೈಬ್ರೆಂಟ್‌ ವಿಲೇಜ್‌-2026: ಯುವಕರೊಂದಿಗೆ ನರೇಂದ್ರ ಮೋದಿ ಸಂವಾದ ನೇರ ಪ್ರಸಾರ

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಮತ್ತು ಯುವಜನರು ಈ ಗಡಿ ಭಾಗದ ಗ್ರಾಮಗಳ ಸಮುದಾಯದೊಂದಿಗೆ ವಾಸವಿದ್ದರು. ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು, ಸ್ವಚ್ಛತಾ ಕಾರ್ಯ, ಸಸಿ ನೆಡುವುದು, ಯುವ ಸಮ್ಮೇಳನ ನಡೆಸುವುದು, ಸಾಂಸ್ಕೃತ ವಿನಿಯಮ ಕಾರ್ಯಕ್ರಮಗಳನ್ನು ನಡೆಸುವುದು ಇತ್ಯಾದಿ ಕಾರ್ಯಗಳನ್ನು ಈ ಯುವಜನರು ಕೈಗೊಂಡಿದ್ದು ವಿಶೇಷ.

ಆನ್​ಲೈನ್ ಕ್ವಿಜ್ ಸ್ಪರ್ಧೆ ಮೂಲಕ ಈ ಯೋಜನೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ರಾಷ್ಟ್ರ ಮಟ್ಟದಲ್ಲಿ ನಡೆದ ಕ್ವಿಜ್ ಸ್ಪರ್ಧೆಯಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಅವರಲ್ಲಿ 400 ಮಂದಿಯನ್ನು ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್​ಗೆ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಯುವಜನರಿಗೆ ಗ್ರಾಮೀಣ ಭಾಗದ ಸಂಸ್ಕೃತಿಯ ಸಮೀಪ ದರ್ಶನವಾಗಿದೆ. ಸ್ಥಳೀಯ ಕಲಾವಿದರು, ಸಂಸ್ಥೆಗಳನ್ನು ಭೇಟಿ ಮಾಡಿ ಅನುಭವ ಕೂಡ ಪಡೆದಿದ್ದಾರೆ.

ಇದನ್ನೂ ಓದಿ: ಲಕ್ಷಕ್ಕೂ ಹೆಚ್ಚು MBBS ಸೀಟುಗಳು; ಇಲ್ಲಿದೆ ಕೌನ್ಸೆಲಿಂಗ್ ಪ್ರಕ್ರಿಯೆ ಮತ್ತು ಟಾಪ್ 10 ವೈದ್ಯಕೀಯ ಕಾಲೇಜುಗಳ ಮಾಹಿತಿ

ಈ ವಿಕಸಿತ್ ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್ ಅನ್ನು ಮೈ ಭಾರತ್ ಯೋಜನೆಯ ಭಾಗವಾಗಿ ಹಮ್ಮಿಕೊಳ್ಳಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:10 pm, Sun, 26 July 26

Follow Us