ದೆಹಲಿಯ ಗುರುದ್ವಾರ ರಕಬ್‌ಗಂಜ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ, ನ್ಯೂಜಿಲೆಂಡ್ ಪ್ರಧಾನಿ ಲಕ್ಸನ್
ನ್ಯೂಜಿಲೆಂಡ್ ಪ್ರಧಾನಿ ಲಕ್ಸನ್ ಅವರು ಭಾರತ ಪ್ರವಾಸದಲ್ಲಿದ್ದು, ಮಾರ್ಚ್ 20ರವರೆಗೆ ಭಾರತದಲ್ಲಿ ಇರಲಿದ್ದಾರೆ. ಲಕ್ಸನ್ ಅವರು ಪ್ರಧಾನಿಯಾಗಿ ಭಾರತಕ್ಕೆ ತಮ್ಮ ಮೊದಲ ಭೇಟಿ ನೀಡಿದ್ದಾರೆ. ನ್ಯೂಜಿಲೆಂಡ್ ಪ್ರಧಾನಿಯೊಬ್ಬರು ಇದುವರೆಗೆ ಪ್ರಯಾಣಿಸಿದ ಅತಿದೊಡ್ಡ ನಿಯೋಗಗಳಲ್ಲಿ ಒಂದಾದ ಅವರ ಜೊತೆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಲಕ್ಸನ್ ನಡುವಿನ ಮಾತುಕತೆಯ ನಂತರ, ಶಿಕ್ಷಣ, ಕ್ರೀಡೆ, ಕೃಷಿ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಎರಡೂ ಕಡೆಯವರು 6 ಒಪ್ಪಂದಗಳಿಗೆ ಸಹಿ ಹಾಕಿದರು. ಹಾಗೇ, ರಕ್ಷಣಾ ಉದ್ಯಮ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಲು ನಿರ್ಧರಿಸಿದರು.
ನವದೆಹಲಿ, (ಮಾರ್ಚ್ 17): ಪ್ರಧಾನಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಇಂದು ಸಂಜೆ ದೆಹಲಿಯ ಗುರುದ್ವಾರ ರಕಬ್ ಗಂಜ್ ಸಾಹಿಬ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇಬ್ಬರೂ ನಾಯಕರು ಹಳದಿ ಸ್ಕಾರ್ಫ್‌ಗಳನ್ನು ಧರಿಸಿ ಗುರು ಗ್ರಂಥ ಸಾಹಿಬ್‌ಗೆ ನಮಸ್ಕರಿಸಿ ಸಿಖ್ ದೇವಾಲಯದಲ್ಲಿ ನಮಸ್ಕರಿಸಿದರು. ದ್ವಿಪಕ್ಷೀಯ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಗಾಢವಾಗಿಸುವತ್ತ ಗಮನಹರಿಸಿ ನ್ಯೂಜಿಲೆಂಡ್ ಪ್ರಧಾನಿ ಭಾನುವಾರ 5 ದಿನಗಳ ಭಾರತ ಭೇಟಿಯನ್ನು ಪ್ರಾರಂಭಿಸಿದರು.
ಇದಕ್ಕೂ ಮೊದಲು, ನ್ಯೂಜಿಲೆಂಡ್ ಇಂದು ರಕ್ಷಣಾ ಸಂಬಂಧಗಳನ್ನು ಸಾಂಸ್ಥಿಕಗೊಳಿಸುವ ಮಹತ್ವಾಕಾಂಕ್ಷೆಯ ಒಪ್ಪಂದಕ್ಕೆ ಸಹಿ ಹಾಕಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಲಕ್ಸನ್ ನಡುವಿನ ಮಾತುಕತೆಯ ನಂತರ, ಶಿಕ್ಷಣ, ಕ್ರೀಡೆ, ಕೃಷಿ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಎರಡೂ ಕಡೆಯವರು 6 ಒಪ್ಪಂದಗಳಿಗೆ ಸಹಿ ಹಾಕಿದರು. ಹಾಗೇ, ರಕ್ಷಣಾ ಉದ್ಯಮ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಲು ನಿರ್ಧರಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ