ಗುಜರಿ ನೀತಿಯಲ್ಲಿ ಹಳೆ ವಾಹನಗಳಿಗೆ ಗುಡ್ ಬೈ ಮತ್ತು ಹೊಸ ವಾಹನ ಕೊಳ್ಳಲು ಇನ್ಸೆಂಟಿವ್!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 14, 2021 | 6:34 PM

ವಾಹನ ಪರಿಸರಕ್ಕೆ ಎಷ್ಟು ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡುತ್ತಿದೆ ಎನ್ನುವುದನ್ನು ಆಧಾರವಾಗಿಟ್ಟುಕೊಂಡು ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗುತ್ತದೆ. ಪ್ರತಿ 200 ಕಿಮೀ ವ್ಯಾಪ್ತಿಯಲ್ಲಿ ವಾಹನಗಳ ಫಿಟ್ನೆಸ್ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ಕೇಂದ್ರ ಸರ್ಕಾರ ಹೊಂದಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರದಂದು ಭಾರತದ ಹೊಸ ವಾಹನ ಗುಜರಿ ನೀತಿಯನ್ನು ಗುಜರಾತನಲ್ಲಿ ನಡೆದ ಹೂಡಿಕೆದಾರರ ಸಮ್ಮೇಳನದಲ್ಲಿ ಲಾಂಚ್ ಮಾಡಿದರು. ಈ ನೀತಿಯನ್ನು ಜಾರಿಗೊಳಿಸುವ ಮೂಲಕ ಭಾರತದಲ್ಲಿ ಜನ ವಾಹನ ಹೊಂದಿರುವ ಅರ್ಥಕ್ಕೆ ಒಂದು ಹೊಸ ಭಾಷ್ಯ ನೀಡುವ ಪ್ರಯತ್ನವಾಗಿದೆ ಎಂದು ಹೇಳಲಾಗುತ್ತಿದೆ. ಹೊಸ ಗುಜರಿ ನೀತಿಯ ಪ್ರಸ್ತಾಪವನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಾರ್ಚ್ನಲ್ಲಿ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದರು.

ಹೊಸ ಗುಜರಿ ನೀತಿಯ ಪ್ರಕಾರ ತಮ್ಮ ಹಳೆ ವಾಹನಗಳನ್ನು ಸ್ಕ್ರ್ಯಾಪ್ ಮಾಡಿ ಹೊಸ ವಾಹನವನ್ನು ಖರೀದಿಸ ಬಯಸುವ ಮಾಲೀಕರು ರಸ್ತೆ ತೆರಿಗೆಯಲ್ಲಿ ಶೇಕಡಾ 25 ರಷ್ಟು ರಿಯಾಯಿತಿ ಪಡೆಯಲಿದ್ದಾರೆ. ಕಮರ್ಷಿಯಲ್ ಉದ್ದೇಶಗಳಿಗೆ ಬಳಸುವ ವಾಹನಗಳ ಮೇಲೆ ಶೇಕಡಾ 15 ರಿಯಾಯಿತಿ ದೊರೆಯಲಿದೆ.

ಶುಕ್ರವಾರ ಗುಜರಿ ನೀತಿಯನ್ನು ಲಾಂಚ್ ಮಾಡಿದ ಪ್ರಧಾನಿಗಳು, ಸದರಿ ನೀತಿಯು ಅಸಮರ್ಥ ಮತ್ತು ಪರಿಸರ ಮಾಲಿನ್ಯಗೊಳಿಸುವ ವಾಹನಗಳ ಬಳಕೆಯನ್ನು ಹಂತ ಹಂತವಾಗಿ ನಿಲ್ಲಿಸಲು ಸಹಾಯವಾಗುತ್ತದೆ ಎಂದು ಹೇಳಿದರು. ಉದ್ದಿಮೆ, ವ್ಯಾಪಾರ ಮತ್ತು ಪರಿಸರಕ್ಕೆ ನೆರವಾಗುವ ಒಂದು ಕಾರ್ಯಸಾಧು ವೃತ್ತೀಯ ಆರ್ಥಿಕತೆಯನ್ನು ಸೃಷ್ಟಿಸುವ ಗುರಿ ನಾವು ಹೊಂದಿದ್ದೇವೆ, ಎಂದು ಪ್ರಧಾನಿ ಮೋದಿ ಹೇಳಿದರು.

ಒಂದು ವೃತ್ತೀಯ ಆರ್ಥಿಕತೆಯು ಮರುಬಳಕೆ, ಹಂಚಿಕೆ, ದುರಸ್ತಿ, ನವೀಕರಣ, ಸಂಪನ್ಮೂಲಗಳ ಮರು ಉತ್ಪಾದನೆ ಮತ್ತು ಮರುಬಳಕೆ ಮೊದಲಾದ ಆಯಾಮಗಳ ಮೇಲೆ ಮುಚ್ಚಿದ ಲೂಪ್ ವ್ಯವಸ್ಥೆಯನ್ನು ಸೃಷ್ಟಿಸಲು ಹಾಗೂ ಸಂಪನ್ಮೂಲಗಳ ಬಳಕೆ, ತ್ಯಾಜ್ಯ ಉತ್ಪಾದನೆ, ಮಾಲಿನ್ಯ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ನೆರವಾಗುತ್ತದೆ.

ನೀವು ಹೊಸ ವಾಹನ ಖರೀದಿಸಿದ ದಿನದಿಂದಲೇ ಅದರ ಮೇಲೆ ಹೊಸ ಗುಜರಿ ನೀತಿ ಅನ್ವಯವಾಗುತ್ತದೆ. ಹಾಗೆಯೇ, ಅಗ್ಗ ದರಕ್ಕೆ ಸಿಗುತ್ತಿದೆ ಅಂತ ಸೆಕೆಂಡ್ ಅಥವಾ ಥರ್ಡ್ ಹ್ಯಾಂಡ್ ವಾಹನಗಳನ್ನು ನೀವು ಖರೀದಿಸುವಂತಿಲ್ಲ. ಇನ್ನು ಮೇಲೆ ಹಳದಿ ಬೋರ್ಡ್ ವಾಹನದ ಆಯಸ್ಸು 10 ವರ್ಷಗಳಾದರೆ, ಬಿಳಿ ಫಲಕದ ಅಯಸ್ಸು 15 ವರ್ಷ ಆಗಿರಲಿದೆ.

ವಾಹನ ಪರಿಸರಕ್ಕೆ ಎಷ್ಟು ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡುತ್ತಿದೆ ಎನ್ನುವುದನ್ನು ಆಧಾರವಾಗಿಟ್ಟುಕೊಂಡು ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗುತ್ತದೆ. ಪ್ರತಿ 200 ಕಿಮೀ ವ್ಯಾಪ್ತಿಯಲ್ಲಿ ವಾಹನಗಳ ಫಿಟ್ನೆಸ್ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ಕೇಂದ್ರ ಸರ್ಕಾರ ಹೊಂದಿದೆ.

ಇದನ್ನೂ ಓದಿ: ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನ, ಆಸ್ತಿಗಾಗಿ ಶರಣೆಯರ ಕಚ್ಚಾಟ; ವಿಡಿಯೋ ಜಾಲತಾಣಗಳಲ್ಲಿ ವೈರಲ್

Published on: Aug 14, 2021 06:03 PM