Loading video

ದೇಶದಲ್ಲಿ ದಲಿತರ ಪರ ನಿಂತಿರೋದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ: ಬಿವೈ ವಿಜಯೇಂದ್ರ

Updated on: Apr 10, 2025 | 12:51 PM

ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪುನಃ ಪಕ್ಷಕ್ಕೆ ವಾಪಸ್ಸು ಕರೆತರಲು ಪ್ರಯತ್ನಿಸುತ್ತೀರಾ, ಅವರು ಹೊಸ ಪಕ್ಷ ಕಟ್ಟದಂತೆ ತಡೆಯುತ್ತೀರಾ ಎಂದು ಕೇಳಿದ ಪ್ರಶ್ನೆಗೆ ವಿಜಯೇಂದ್ರ ಆಮೇಲೆ ಮಾತಾಡುತ್ತೇನೆ ಅಂತ ಹೇಳುತ್ತ ಅಲ್ಲಿಂದ ಹೊರಟರು. ಪಕ್ಷದ ಪ್ರಮುಖ ನಾಯಕರು ಉಚ್ಚಾಟನೆಗೊಂಡಿರುವ ಬಸನಗೌಡ ಯತ್ನಾಳ್ ಅವರ ಬಗ್ಗೆ ಮಾತಾಡಲು ಹಿಂದೇಟು ಹಾಕುತ್ತಿದ್ದಾರೆ.

ಉಡುಪಿ, ಏಪ್ರಿಲ್ 10: ಉಡುಪಿ ನಗರದಲ್ಲಿ ಇಂದು ಬಿಜೆಪಿ ನಾಯಕರು ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆ (Janakrosha Yaatre) ನಡೆಸುತ್ತಿದ್ದು ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿಜಯೇಂದ್ರ, ಇವತ್ತು ದೇಶದಲ್ಲಿ ದಲಿತರ ಪರ ನಿಂತಿರೋದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅವರ ನೇತೃತ್ವದ ಸರ್ಕಾರ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರು ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಅದರ ಶಿಲ್ಪಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಎಷ್ಟು ಗೌರವ ನೀಡುತ್ತಾರೆ ಅಂತ ದೇಶಕ್ಕೆ ಗೊತ್ತಾಗಿದೆ ಎಂದರು.

ಇದನ್ನೂ ಓದಿ:    ಮುಸಲ್ಮಾನರಿಗೆ ಮೀಸಲಾತಿ ನೀಡುವ ಬಿಲ್ ಪಾಸ್ ಮಾಡಲು ನಮ್ಮ ಶಾಸಕರನ್ನು ಸಸ್ಪೆಂಡ್ ಮಾಡಿದ್ದಾರೆ: ವಿಜಯೇಂದ್ರ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ