ನಾಳೆ ಪ್ರಧಾನಿ ಮೋದಿ ಉದ್ಘಾಟಿಸಲಿರುವ ವಿಶ್ವ ದರ್ಜೆಯ ನವಿ ಮುಂಬೈ ವಿಮಾನ ನಿಲ್ದಾಣ ಹೇಗಿದೆ ನೋಡಿ
ಮಹಾರಾಷ್ಟ್ರಕ್ಕೆ ಎರಡು ದಿನಗಳ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 8ರಂದು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹಾಗೂ ಮುಂಬೈ ಮೆಟ್ರೋದ ಲೈನ್ 3 (ಅಕ್ವಾ ಲೈನ್)ನ ಅಂತಿಮ ಹಂತವನ್ನು ಉದ್ಘಾಟಿಸಲಿದ್ದಾರೆ. ಈ ವಿಮಾನ ನಿಲ್ದಾಣವು 47 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರ ಮತ್ತು ಸುಸ್ಥಿರ ವಿಮಾನಯಾನ ಇಂಧನ (SAF) ಸಂಗ್ರಹ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ವಿಮಾನ ನಿಲ್ದಾಣವು ನೇರ ನೀರಿನ ಟ್ಯಾಕ್ಸಿ ಸಂಪರ್ಕವನ್ನು ಹೊಂದಿದ್ದು, ಇದು ದೇಶದಲ್ಲಿ ಈ ರೀತಿಯ ಮೊದಲ ವಿಮಾನ ನಿಲ್ದಾಣವಾಗಿದೆ.
ಮುಂಬೈ, ಅಕ್ಟೋಬರ್ 7: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಸುಮಾರು 19,650 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ನಾಳೆ (ಬುಧವಾರ) ಉದ್ಘಾಟಿಸಲಿದ್ದಾರೆ. ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯಾಗಿದೆ. ಇದನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ನಿರ್ಮಿಸಲಾಗಿದೆ.
ನವಿ ಮುಂಬೈ ವಿಮಾನ ನಿಲ್ದಾಣವು ಒಟ್ಟು 1,160 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದೆ. ಅದಾನಿ ಗ್ರೂಪ್‌ನ ಕಂಪನಿಯಾದ ಅದಾನಿ ಏರ್‌ಪೋರ್ಟ್ಸ್ ಹೋಲ್ಡಿಂಗ್ಸ್ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೇ. 74ರಷ್ಟು ಪಾಲನ್ನು ಹೊಂದಿದ್ದು, ಉಳಿದ ಶೇ. 26ರಷ್ಟು ಪಾಲನ್ನು ಸಿಡ್ಕೊ ಹೊಂದಿದೆ.
ಈ ವಿಮಾನ ನಿಲ್ದಾಣವು 47 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರ ಮತ್ತು ಸುಸ್ಥಿರ ವಿಮಾನಯಾನ ಇಂಧನ (SAF) ಸಂಗ್ರಹ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ವಿಮಾನ ನಿಲ್ದಾಣವು ನೇರ ನೀರಿನ ಟ್ಯಾಕ್ಸಿ ಸಂಪರ್ಕವನ್ನು ಹೊಂದಿದ್ದು, ಇದು ದೇಶದಲ್ಲಿ ಈ ರೀತಿಯ ಮೊದಲ ವಿಮಾನ ನಿಲ್ದಾಣವಾಗಿದೆ. ವಿಮಾನ ನಿಲ್ದಾಣದಲ್ಲಿನ ಎಲ್ಲಾ ಟರ್ಮಿನಲ್‌ಗಳನ್ನು ಸ್ವಯಂಚಾಲಿತ ಪೀಪಲ್ ಮೂವರ್ (APM) ಮೂಲಕ ಸಂಪರ್ಕಿಸಲಾಗುತ್ತದೆ. ಇದು ವಾರ್ಷಿಕವಾಗಿ 90 ಮಿಲಿಯನ್ ಪ್ರಯಾಣಿಕರು ಮತ್ತು 3.25 ಮಿಲಿಯನ್ ಮೆಟ್ರಿಕ್ ಟನ್ ಸರಕುಗಳನ್ನು ನಿರ್ವಹಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

