ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಅಪಹರಿಸಿ ತಂದಿದ್ದ ಟೊಯೊಟಾ ಇಟಿಯಾಸ್ ಕಾರನ್ನು ಪೊಲೀಸರು ತಪಾಸಣೆ ನಡೆಸಿದರು. ಕಾರು ಚಾಲಕ ರವಿ ಮನೆಯಲ್ಲಿ ಮಹಜರು ಸಹ ಮಾಡಲಾಗಿದೆ.
ರೇಣುಕಾ ಸ್ವಾಮಿ (Renuka Swamy) ಪ್ರಕರಣದ ಆಳಕ್ಕೆ ತಲುಪುವ ಪೂರ್ಣ ಉಮೇದಿನಿಂದಲೇ ಚುರುಕಾಗಿ ತನಿಖೆ ಮಾಡುತ್ತಿದ್ದಾರೆ ಕಾಮಾಕ್ಷಿಪಾಳ್ಯ ಪೊಲೀಸರು. ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದ ಟೊಯೊಟಾ ಇಟಿಯಾಸ್ ಕಾರನ್ನು ಪೊಲೀಸರು ತಪಾಸಣೆ ಮಾಡಿ, ವಶಕ್ಕೆ ಪಡೆದುಕೊಂಡಿದ್ದಾರೆ. ಕಾರಿನ ಚಾಲಕ ರವಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಬಾಡಿಗೆಗೆ ಕರೆದರು ಎಂಬ ಕಾರಣಕ್ಕೆ ಹೋಗಿದ್ದ ರವಿ ಈಗ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾನೆ. ಆತನ ಕುಟುಂಬದವರು, ಗೆಳೆಯರಿಗೆ ಇದು ನಂಬಲಾಗುತ್ತಿಲ್ಲ. ತಮ್ಮ ರವಿಗೆ ಈ ಸ್ಥಿತಿ ಬಂದಿದ್ದಕ್ಕೆ ಅವರು ನಟ ದರ್ಶನ್ಗೆ ಹಿಡಿ ಶಾಪ ಹಾಕಿದ್ದಾರೆ. ರೇಣುಕಾ ಸ್ವಾಮಿಯಂತೆ ದರ್ಶನ್ ಸಹ ಸಾಯಲಿ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ