Loading video

ಕರ್ನಾಟಕ ಬಂದ್: ಪೊಲೀಸರು ಪ್ರತಿಭಟನೆ ನಡೆಸಲು ಅವಕಾಶ ನೀಡುತ್ತಿಲ್ಲವೆಂದ ಕನ್ನಡಪರ ಸಂಘಟನೆಗಳು

|

Updated on: Mar 22, 2025 | 10:59 AM

ಬೆಳಗಾವಿಯಲ್ಲಿ ಶಿವಸೇನೆ ಮತ್ತು ಎಂಇಎಸ್ ಗೂಂಡಾಗಳು ಬಸ್ ಕಂಡಕ್ಟರ್ ಒಬ್ಬರ ಮೇಲೆ ನಡೆಸಿದ ಹಲ್ಲೆಯನ್ನು ವಿರೋಧಿಸಿ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಪರ ಸಂಘಟನೆಗಳು ಇವತ್ತು ಕರ್ನಾಟಕ ಬಂದ್​​ಗೆ ಕರೆ ನೀಡಿವೆ. ರಾಜ್ಯದ ಕೆಲ ಜಿಲ್ಲೆಗಳಲ್ಲಷ್ಟೇ ಬಂದ್​ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉಳಿದ ಭಾಗಗಳಲ್ಲಿ ಜನಜೀವನ ಎಂದಿನಂತೆ ಸಾಮಾನ್ಯವಾಗಿದೆ.

ಬೆಂಗಳೂರು, ಮಾರ್ಚ್ 22: ಕರ್ನಾಟಕ ಬಂದ್ ಆಚರಣೆಗೆ ಪೊಲೀಸರು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಕನ್ನಡ ಪರ ಸಂಘಟನೆಯ ಪದಾಧಿಕಾರಿಯೊಬ್ಬರು (office bearer) ದೂರುತ್ತಿದ್ದಾರೆ. ಮೆಜೆಸ್ಟಿಕ್ ಬಳಿ ಕಾರಿನಲ್ಲಿ ಬಂದ ಪ್ರತಿಭಟನೆಕಾರರು ತಮ್ಮ ಸಂಗಡಿಗರನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿದ್ದಾಗ ಪೊಲೀಸರು ಅವರನ್ನು ಅಲ್ಲಿಂದ ಸಾಗಹಾಕಿದರು. ಮಾಧ್ಯಮಗಳನ್ನು ಉದ್ದೇಶಿಸಿ ಮಾತಾಡಿದ ಪದಾಧಿಕಾರಿಯೊಬ್ಬರು, ಪೊಲೀಸರು ನಮ್ಮನ್ನು ಪ್ರತಿಭಟನೆ ಮಾಡಲು ಬಿಡುತ್ತಿಲ್ಲ, ಸರ್ಕಾರಕ್ಕೆ ನಮ್ಮ ಪ್ರತಿಭಟನೆ ಬೇಕಿಲ್ಲ, ಕರ್ನಾಟಕ ಸರ್ಕಾರಕ್ಕೆ ಧಿಕ್ಕಾರ ಎನ್ನುತ್ತಾ ಕಾರಿನಲ್ಲಿದ್ದರೊಂದಿಗೆ ಅಲ್ಲಿಂದ ಹೊರಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಎಲ್ ಅಂಡ್ ಟಿ ಮುಖ್ಯಸ್ಥರ 90 ಗಂಟೆ ಕೆಲಸದ ಹೇಳಿಕೆ; ವಾಟಾಳ್ ನಾಗರಾಜ್ ಪ್ರತಿಭಟನೆ