ಅಥಣಿ ಟ್ರ್ಯಾಕ್ಟರ್ ಹಗ್ಗ-ಜಗ್ಗಾಟ ಸ್ಫರ್ಧೆ, ಅಯೋಜಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು!
ಚಮಕೇರಿ ಗ್ರಾಮ ಪಂಚಾಯಿತಿಯ ಪಿಡಿಒ ವಿಜಯಲಕ್ಷ್ಮಿ ಅವರು ಐಗಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ಬಳಿಕ ಕೇಸು ದಾಖಲಿಸಿಕೊಳ್ಳಲಾಗಿದೆ ಮತ್ತು ಅಥಣಿಯ ಸಿಪಿಐ ಶಂಕರಗೌಡ ಬಸನಗೌಡರ್ ಮತ್ತು ಪಿಎಸ್ ಐ ಪವಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ: ಕೇವಲ ಎರಡು ದಿನಗಳ ಹಿಂದೆಯಷ್ಟೇ ನಾವು ಅಥಣಿ (Athani) ತಾಲ್ಲೂಕಿನ ಚಮಕೇರಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಟ್ರ್ಯಾಕ್ಟರ್ ಹಗ್ಗ-ಜಗ್ಗಾಟ (tractor tug of war) ಸ್ಪರ್ಧೆ ಬಗ್ಗೆ ವರದಿ ಮಾಡಿ ಇದು ತುಂಬಾ ಅಪಾಯಕಾರಿ ಸ್ಪರ್ಧೆ (dangerous sport) ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಹೇಳಿದ್ದೆವು. ನಮ್ಮ ವರದಿಗಳಿಗೆ ಸೂಕ್ತ ಪ್ರತಿಕ್ರಿಯೆ ಸಿಕ್ಕಿದೆ ಮಾರಾಯ್ರೇ. ಚಮಕೇರಿ ಗ್ರಾಮ ಪಂಚಾಯಿತಿಯ ಪಿಡಿಒ ವಿಜಯಲಕ್ಷ್ಮಿ ಅವರು ಐಗಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ಬಳಿಕ ಕೇಸು ದಾಖಲಿಸಿಕೊಳ್ಳಲಾಗಿದೆ ಮತ್ತು ಅಥಣಿಯ ಸಿಪಿಐ ಶಂಕರಗೌಡ ಬಸನಗೌಡರ್ ಮತ್ತು ಪಿಎಸ್ ಐ ಪವಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published on: Jul 01, 2022 02:20 PM