‘ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ’: ಪ್ರಿಯಾಂಕ್​​ ಖರ್ಗೆ ಪರ ಯುವ ಕಾಂಗ್ರೆಸ್​​ನಿಂದ ಪೋಸ್ಟರ್​​ ಅಭಿಯಾನ

Updated on: Nov 08, 2026 | 10:18 AM

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಕೌಂಟರ್ ನೀಡಲು ಬೆಂಗಳೂರಿನ ಹಲವೆಡೆ ಯುವ ಕಾಂಗ್ರೆಸ್ 'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ' ಎಂಬ ಪೋಸ್ಟರ್‌ಗಳನ್ನು ಅಂಟಿಸಿದ್ದು, ಕಾಂಗ್ರೆಸ್-ಜೆಡಿಎಸ್ ಪೋಸ್ಟರ್ ವಾರ್ ತೀವ್ರಗೊಂಡಿದೆ. ಪ್ರಿಯಾಂಕ್​​ ಖರ್ಗೆ ನೀಡಿದ್ದ ಹಳ್ಳಿಗುಗ್ಗು ಹೇಳಿಕೆ ಖಂಡಿಸಿ ಹಾಸನ, ರಾಮನಗರದಲ್ಲಿ ಜೆಡಿಎಸ್​​ ಕಾರ್ಯಕರ್ತರು ಈ ಹಿಂದೆ ಪೋಸ್ಟರ್ ಅಂಟಿಸಿದ್ದರು ಎನ್ನುವುದಿಲ್ಲಿ ಗಮನಾರ್ಹ.

ಬೆಂಗಳೂರು, ನವೆಂಬರ್​​ 08: ರಾಜ್ಯ ರಾಜಕಾರಣದಲ್ಲಿ ಬ್ಯಾನರ್, ಪೋಸ್ಟರ್ ವಾರ್​​ ಜೋರಾಗಿದೆ. ಗೃಹ ಸಚಿವ ಪ್ರಿಯಾಂಕ್‌ ಪರವಾಗಿ ಬೆಂಗಳೂರಿನ ಹಲವೆಡೆ ಕಾಂಗ್ರೆಸ್‌ ಯುವ ಘಟಕದಿಂದ ಪೋಸ್ಟರ್ ಅಂಟಿಸಲಾಗಿದೆ. ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್​​ ನೀಡಿ, ‘ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ’ ಎಂಬ ಬರಹಗಳು ಪೋಸ್ಟರ್​​ನಲ್ಲಿವೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ JDS ಕಚೇರಿ ಬಳಿ, ಓಕಳಿಪುರಂ, ಮೆಜೆಸ್ಟಿಕ್​ನಲ್ಲೂ ಯುವ ಕಾಂಗ್ರೆಸ್ ಕಾರ್ಯಕರ್ತರು ರಾತ್ರೋರಾತ್ರಿ ಪೋಸ್ಟರ್​ ಅಂಟಿಸಿದ್ದಾರೆ. ಪ್ರಿಯಾಂಕ್​​ ಖರ್ಗೆ ನೀಡಿದ್ದ ಹಳ್ಳಿಗುಗ್ಗು ಹೇಳಿಕೆ ಖಂಡಿಸಿ ಹಾಸನ, ರಾಮನಗರದಲ್ಲಿ ಜೆಡಿಎಸ್​​ ಕಾರ್ಯಕರ್ತರು ಈ ಹಿಂದೆ ಪೋಸ್ಟರ್ ಅಂಟಿಸಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More