Delhi Assembly Poll Results: ಕಾಂಗ್ರೆಸ್ ಪಕ್ಷಕ್ಕಾದ ಹೀನಾಯ ಸೋಲನ್ನು ಎಐಸಿಸಿ ಮತ್ತು ಕೆಪಿಸಿಸಿ ವಿಶ್ಲೇಷಣೆ ಮಾಡಲಿವೆ: ಪರಮೇಶ್ವರ್

Updated By: Digi Tech Desk

Updated on: Feb 08, 2025 | 12:45 PM

ಭ್ರಷ್ಟಾಚಾರ ನಿರ್ಮೂಲನೆಯ ಮಂತ್ರ ಜಪಿಸುತ್ತ ಅಧಿಕಾರಕ್ಕೆ ಬಂದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಕ್ಷ ಭ್ರಷ್ಟಾಚಾರದ ಅರೋಪಗಳಿಂದಾಗೇ ಅಧಿಕಾರ ಕಳೆದುಕೊಳ್ಳುವಾಂತಾಗಿದ್ದು ವಿಪರ್ಯಾಸವಲ್ಲವೇ ಎಂದು ಕೇಳಿದ ಪ್ರಶ್ನೆಗೆ ಪರಮೇಶ್ವರ್ ನೇರವಾಗಿ ಉತ್ತರಿಸದೆ, ನೋಡೋಣ ಎಲ್ಲ ಫಲಿತಾಂಶಗಳು ಬಂದ ಬಳಿಕ ವಿಶ್ಲೇಷಣೆ ಮಾಡೋಣ ಎಂದು ಹೇಳಿದರು.

ಬೆಂಗಳೂರು: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ, 70 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಒಬ್ಬೇಒಬ್ಬ ಅಭ್ಯರ್ಥಿಯೂ ಮುನ್ನಡೆ ಸಾಧಿಸಿಲ್ಲ. ಕಾಂಗ್ರೆಸ್ ಮತ್ತು ಅಪ್ ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟು ಹೋರಾಟ ನಡೆಸಿದ್ದರೆ ಬಿಜೆಪಿ ಗೆಲ್ಲುವುದು ಸಾಧ್ಯವಾಗುತ್ತಿರಲಿಲ್ಲ ಎಂದ ಮಾಧ್ಯಮದವರು ಹೇಳಿದ್ದಕ್ಕೆ ಉತ್ತರಿಸಿದ ಗೃಹ ಸಚಿವ ಜಿ ಪರಮೇಶ್ವರ್, ಫಲಿತಾಂಶಗಳೆಲ್ಲ ಪ್ರಕಟವಾದ ಬಳಿಕ ಎಐಸಿಸಿ ಅವರು ವಿಶ್ಲೇಷಣೆ ಮಾಡುತ್ತಾರೆ ಕೆಪಿಸಿಸಿಯೂ ಅದರ ಬಗ್ಗೆ ಯೋಚಿಸಲಿದೆ, ದೆಹಲಿ ಚುನಾವಣಾ ಫಲಿತಾಂಶ ಬೇರೆ ರಾಜ್ಯ ಚುನಾವಣೆಗಳ ಮೇಲೆ ಪ್ರಭಾವ ಬೀರಲ್ಲ, ಲೋಕಸಭಾ ಚುನಾವಣೆಯಲ್ಲಿ ಬೇರೆ ವಿಷಯಗಳು ಚರ್ಚೆಗೆ ಬಂದು ಮೈತ್ರಿ ಏರ್ಪಡುತ್ತದೆ, ವಿಧಾನಸಭಾ ಚುನಾವಣೆ ಸ್ಥಳೀಯ ಇಶ್ಯೂಗಳ ಮೇಲೆ ನಡೆಯುತ್ತದೆ, ಮೈತ್ರಿ ವರ್ಕೌಟ್ ಅಗಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಹೀನಾಯ ಸೋಲಿನ ಭವಿಷ್ಯ ನುಡಿದ ಚುನಾವಣೋತ್ತರ ಸಮೀಕ್ಷೆಗಳು

Published on: Feb 08, 2025 12:39 PM