ಬಸನಗೌಡ ಯತ್ನಾಳ್ ಸಕ್ಕರೆ ಕಾರ್ಖಾನೆ ಪುನರಾರಂಭಿಸಲು ಮಾಲಿನ್ಯ ಮಂಡಳಿ ತೊಡಕು, ಅಶೋಕ ಆಕ್ರೋಶ!

|

Updated on: Aug 28, 2024 | 10:14 AM

ಬಸನಗೌಡ ಯತ್ನಾಳ್ ನಿನ್ನೆ ಬೆಳಗ್ಗೆಯಿಂದ ಕ್ಲೀಯರೆನ್ಸ್ ಸರ್ಟಿಫಿಕೇಟ್ ಪಡೆದುಕೊಳ್ಳಲು ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಕುಳಿತರೂ ಪ್ರಮಾಣ ಪತ್ರ ಸಿಕ್ಕಿಲ್ಲ. ವಿಷಯ ಗೊತ್ತಾದ ಕೂಡಲೇ ಅಲ್ಲಿಗೆ ಧಾವಿಸಿದ ಅಶೋಕ ಸರ್ಕಾರ ಮತ್ತು ಮಂಡಳಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಂಗಳೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಿದ್ದರಾಮಯ್ಯ ಸರ್ಕಾರ ದ್ವೇಷ ಸಾಧಿಸುತ್ತಿದೆಯೇ? ವಿಪಕ್ಷ ನಾಯಕ ಅಶೋಕ ಹೇಳುವಂತೆ ಹೌದು. ಸುಮಾರು 4 ತಿಂಗಳ ಹಿಂದೆ ಯತ್ನಾಳ್ ಅವರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ಮುಚ್ಚಿಸಿತ್ತು. ಶಾಸಕರು ಹೈಕೋರ್ಟ್ ನಲ್ಲಿ ದಾವೆ ಹೂಡಿ ಜಯ ಸಾಧಿಸಿರುವ ಯತ್ನಾಳ್ ನ್ಯಾಯಲಯದಿಂದ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಚಟುವಟಿಕೆ ಮುಂದುವರೆಸಲು ಆದೇಶ ಪಡೆದರೂ ಮಾಲಿನ್ಯ ನಿಯಂತ್ರಣ ಒಂದಿಲ್ಲೊಂದು ಸಬೂಬು ಹೇಳುತ್ತಾ ಕ್ಲೀಯರೆನ್ಸ್ ಸರ್ಟಿಫಿಕೇಟ್ ನೀಡುತ್ತಿಲ್ಲವೆಂದು ಅಶೋಕ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕೋರ್ಟ್​ ಆದೇಶದ ನಂತರವೂ ಸಕ್ಕರೆ ಕಾರ್ಖಾನೆ ತೆರೆಯಲು ಅನುಮತಿ ನೀಡದ ಪಿಸಿಬಿ: ಯತ್ನಾಳ್​ ಧರಣಿ