ಕಾರ್ಯಕ್ರಮ ನಿಮ್ಮಪ್ಪಂದಲ್ಲ, ಸಿದ್ದರಾಮಯ್ಯ ಸರ್ಕಾರದ್ದು ಅಂತ ಹೇಳಿದ್ದು ನಿಜವೆಂದ ಶಾಸಕ ಪ್ರದೀಪ್ ಈಶ್ವರ್

|

Updated on: Mar 18, 2025 | 12:10 PM

ನಿಮ್ಮಪ್ಪಂದಾ ಅಂತ ಹೇಳೋದು ಅಸಂದೀಯ ಪದ ಅಲ್ಲ, ಶಬ್ದವನ್ನು ಹುಟ್ಟು ಹಾಕಿದ್ದು ತಾನಲ್ಲ, ಬಿಜೆಪಿ ನಾಯಕರಾದ ಆರ್ ಅಶೋಕ, ಸಿಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿವೈ ವಿಜಯೇಂದ್ರ ಅವರು ಈ ಪದವನ್ನು ಅಸೆಂಬ್ಲಿಯಲ್ಲಿ ನೂರಾರು ಬಾರಿ ಬಳಸಿದ್ದ್ದಾರೆ ಎನ್ನುವ ಈಶ್ವರ್ ತಾನು ಬಲಿಜ ಸಮುದಾಯಕ್ಕೆ ತಾನು 2ಎ ಮೀಸಲಾತಿ ತಂದೆ ತರುತ್ತೇನೆ ಎನ್ನುತ್ತಾರೆ.

ಬೆಂಗಳೂರು, 18 ಮಾರ್ಚ್: ರವೀಂದ್ರ ಕಲಾಕ್ಷೇತ್ರದಲ್ಲಿ ಮೊನ್ನೆ ನಡೆದ ಕೈವಾರ ತಾತಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಪಿಸಿ ಮೋಹನ್ (PC Mohan) ಮತ್ತು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವೆ ನಡೆದ ಮಾತಿನ ಜಟಾಪಟಿಯ ಬಗ್ಗೆ ಈಶ್ವರ್ ಸ್ಪಷ್ಟನೆ ನೀಡಿದ್ದಾರೆ. ಎಂಅರ್ ಸೀತಾರಾಮ್ ಭಾಷಣ ಮುಗಿಸಿ ವಾಪಸ್ಸು ಹೋಗುವಾಗ ಮೋಹನ್ ಅವರ ಬಲಗೈ ಬಂಟನೊಬ್ಬ ವೇದಿಕೆ ಮೇಲೆ ಬಂದು ಬಲಿಜ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ಏನೂ ಮಾಡಿಲ್ಲ, ಕೇವಲ ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳು ಸಮಾಜವನ್ನು ಬಲಿಷ್ಠಗೊಳಿಸಿವೆ ಅಂತ ಹೇಳಿದಾಗ ತಾನು ಇದು ನಿಮ್ಮಪ್ಪನ ಕಾರ್ಯಕ್ರಮವಲ್ಲ, ಸಿದ್ದರಾಮಯ್ಯ ಸರ್ಕಾರದ ಕಾರ್ಯಕ್ರಮ ಅಂತ ಹೇಳಿದ್ದು ನಿಜ ಎಂದು ಈಶ್ವರ್ ಹೇಳುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಭಗವದ್ಗೀತೆ ಮೇಲೆ ತನ್ನೊಂದಿಗೆ ಚರ್ಚೆಗೆ ಬರಲು ಅಶೋಕ್, ಸಿಟಿ ರವಿ ಮತ್ತು ಯತ್ನಾಳ್ ಗೆ ಪ್ರದೀಪ್ ಈಶ್ವರ್ ಪಂಥಾಹ್ವಾನ