ತನ್ನ ವಿರುದ್ಧ ಮೀಡಿಯ ಟ್ರಯಲ್ ನಡೆಸದಂತೆ ಪ್ರಜ್ವಲ್ ರೇವಣ್ಣ ವಿನಂತಿಸಿಕೊಂಡಿದ್ದಾರೆ: ಜಿ ಅರುಣ್, ಪ್ರಜ್ವಲ್ ವಕೀಲ

ಅರುಣ್​ ಕುಮಾರ್​ ಬೆಳ್ಳಿ

Updated on: May 31, 2024 | 12:20 PM

ಹೊಳೆನರಸೀಪುರದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಮತ್ತು ತಾನು ಅವರಿಗೆ ನ್ಯಾಯಾಲಯದ ಪ್ರಕ್ರಿಯೆಗಳನ್ನು ತಿಳಿಸಿರುವುದಾಗಿ ಅರುಣ್ ಹೇಳಿದರು. ಪ್ರಜ್ವಲ್ ಗೆ ಜಾಮೀನು ಕೋರಿ ಸಲ್ಲಿಸಿದ ಮನವಿ ಕೋರ್ಟ್ ಮುಂದಿದೆ, ವಿಚಾರಣೆ ಇಷ್ಟರಲ್ಲೇ ಶುರುವಾಗಲಿದೆ ಎಂದು ಅವರು ತಿಳಿಸಿದರು.

ಬೆಂಗಳೂರು: ಎಸ್ಐಟಿ ಅಧಿಕಾರಿಗಳಿಂದ ಪ್ರಜ್ವಲ್ ರೇವಣ್ಣರನ್ನು (Prajwal Revanna) ಭೇಟಿಯಾಗುವ ಅನುಮತಿ ಸಿಕ್ಕ ಬಳಿಕ ಅವರ ವಕೀಲ ಜಿ ಅರುಣ್ (G Arun, lawyer), ಅವರೊಂದಿಗೆ ಮಾತುಕತೆ ನಡೆಸಿ ಹೊರಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಪ್ರಜ್ವಲ್ ಮಾಧ್ಯಮದವರಿಗೆ ಮೀಡಿಯ ಟ್ರಯಲ್ (media trial) ನಡೆಸದಂತೆ ವಿನಂತಿ ಮಾಡಿಕೊಂಡಿದ್ದಾರೆ ಮತ್ತು ತನ್ನ ವಿರುದ್ಧ ನಕಾರಾತ್ಮಕ ಪ್ರಚಾರ ನಡೆಸದಂತೆ ಆಗ್ರಹಿಸಿದ್ದಾರೆ ಎಂದು ವಕೀಲ ಅರುಣ್ ಹೇಳಿದರು. ವಕೀಲನಾಗಿ ತನ್ನ ಕೆಲಸ ನ್ಯಾಯಾಲಯದಲ್ಲಿ ಮಾಡುವುದಾಗಿ ಹೇಳಿದ ಅರುಣ್, ಮಾಧ್ಯಮದವರೂ ತಮ್ಮ ಕೆಲಸ ಮಾಡಲಿ ಅದರೆ ಪ್ರಜ್ವಲ್ ಬಗ್ಗೆ ನೆಗೆಟಿವ್ ವಿಚಾರಗಳನ್ನು ವರದಿ ಮಾಡೋದು ಬೇಡ ಎಂದು ಅರುಣ್ ಹೇಳಿದರು. ತಾನೀಗ ಎಸ್ಐಟಿ ಟೀಮಿಗೆ ಶರಣಾಗಿ ವಿಚಾರಣೆ ಮತ್ತು ತನಿಖೆ ಎದುರಿಸಲು ಸಿದ್ಧನಿದ್ದೇನೆ ಮತ್ತು ತನಿಖೆಯಲ್ಲಿ ಸಂಪೂರ್ಣ ಸಹಕಾರ ನೀಡುತ್ತೇನೆ ಅಂತ ಅವರು ಹೇಳಿದ್ದಾರೆಂದು ವಕೀಲ ಅರುಣ್ ಹೇಳಿದರು. ಹೊಳೆನರಸೀಪುರದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಮತ್ತು ತಾನು ಅವರಿಗೆ ನ್ಯಾಯಾಲಯದ ಪ್ರಕ್ರಿಯೆಗಳನ್ನು ತಿಳಿಸಿರುವುದಾಗಿ ಅರುಣ್ ಹೇಳಿದರು. ಪ್ರಜ್ವಲ್ ಗೆ ಜಾಮೀನು ಕೋರಿ ಸಲ್ಲಿಸಿದ ಮನವಿ ಕೋರ್ಟ್ ಮುಂದಿದೆ, ವಿಚಾರಣೆ ಇಷ್ಟರಲ್ಲೇ ಶುರುವಾಗಲಿದೆ ಎಂದು ಅವರು ತಿಳಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅತ್ಯಾಚಾರಿ ಪ್ರಜ್ವಲ್ ರೇವಣ್ಣ ಒಬ್ಬ ಸ್ಯಾಡಿಸ್ಟ್, ಅವನನ್ನು ಹುಚ್ಚಾಸ್ಪತ್ರೆಗೆ ಕಳಿಸಬೇಕು: ಕೆ ನೀಲಾ, ಸಾಮಾಜಿಕ ಹೋರಾಟಗಾರ್ತಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.